ಸಾಕ್ಷಿಗೆ ಪದಕ: ಕುಸ್ತಿ ಪರಂಪರೆಯ ಮೈಸೂರಿನಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ಇನ್ನಾದರೂ ಸಿಗಲಿದೆಯೇ ಪ್ರೋತ್ಸಾಹ?
ಮೈಸೂರು ಕುಸ್ತಿ ಕ್ರೀಡೆಗೆಯಲ್ಲಿ ಪರಂಪರೆಯ ಇತಿಹಾಸವನ್ನೇ ಹೊಂದಿದೆಯಾದರೂ, ಮೈಸೂರಿನಲ್ಲಿ ಮಹಿಳೆಯರಿಗೆ ಕುಸ್ತಿಯಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಕ್ಕಿಲ್ಲ.

ಮೈಸೂರು: ಮೈಸೂರು ಕುಸ್ತಿ ಕ್ರೀಡೆಗೆಯಲ್ಲಿ ಪರಂಪರೆಯ ಇತಿಹಾಸವನ್ನೇ ಹೊಂದಿದೆಯಾದರೂ, ಮೈಸೂರಿನಲ್ಲಿ ಮಹಿಳೆಯರಿಗೆ ಕುಸ್ತಿಯಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಕ್ಕಿಲ್ಲ.
ಆದರೆ ಹರ್ಯಾಣದ ಕುಸ್ತಿ ಪಟು ಸಾಕ್ಷಿ ಮಲಿಕ್ ರಿಯೋ ಒಲಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದು, ಮಹಿಳಾ ಸ್ಪರ್ಧಿಗಳತ್ತ ಹೆಚ್ಚು ಗಮನ ಹರಿಸದೆ ಇದ್ದ ಕುಸ್ತಿ ತರಬೇತುದಾರರು ಇನ್ನು ಮುಂದೆಯಾದರೂ ಮಹಿಳಾ ಸ್ಪರ್ಧಿಗಳತ್ತ ಹೆಚ್ಚಿನ ಗಮನ ಹರಿಸುತ್ತಾರೆ ಎಂಬ ನಿರೀಕ್ಷೆ ಉಂಟಾಗಿದೆ. ಸಾಕ್ಷಿ ಮಲಿಕ್ ಪದಕ ಗೆದ್ದಿರುವುದು ಮಹಿಳಾ ಕ್ರೀಡಾಪಟುಗಳನ್ನು ಉತ್ತೇಜಿಸಲು ಸೂಕ್ತವಾದ ಸಮಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪ್ರಸ್ತುತ ಮೈಸೂರು ನಗರದಲ್ಲಿ ಕುಸ್ತಿಯನ್ನು ಕೇವಲ ನಾಲ್ಕು ಮಹಿಳೆಯರು ಮಾತ್ರ ಅಭ್ಯಾಸ ಮಾಡುತ್ತಿದ್ದು, ನಾಲ್ವರ ಪೈಕಿ ಇಬ್ಬರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ಗುರ್ಗಾಂವ್ ಮೂಲದ ಮತ್ತೋರ್ವ ಯುವತಿ ಕುಸ್ತಿ ಕ್ರೀಡೆಯಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದ್ದು, ಇನ್ನು 3-4 ವರ್ಷಗಳಲ್ಲಿ ಯುವತಿ ಶಿವಾನಿ ಉನ್ನತ ಮಟ್ಟದ ಸ್ಪರ್ಧೆಯಲ್ಲಿ ಪದಕ ಗೆಲ್ಲುತ್ತಾಳೆ ಎಂದು ತರಬೇತುದಾರ ಎಲ್ ಮಂಜಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಮೈಸೂರು ಗ್ರಾಮೀಣ ಭಾಗದ ರಮ್ಯಾ-ರೀಟಾ ಎಂಬ ಯುವತಿಯರು ಪದಕ ಗೆದ್ದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


