ಪ್ರಧಾನಿ ಮೋದಿ ಈಗಲೂ ಜನಪ್ರಿಯ ನಾಯಕ: ನೂತನ ಸಮೀಕ್ಷೆ
ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಅಬಾಧಿತವಾಗಿದ್ದು, ದೇಶದಲ್ಲಿ ಈಗ ಲೋಕಸಭೆ ಚುನಾವಣೆ ನಡೆದರೂ ಎನ್ ಡಿಎ ಬಹುಮತ ಪಡೆಯಲಿದೆ...

Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಅಬಾಧಿತವಾಗಿದ್ದು, ದೇಶದಲ್ಲಿ ಈಗ ಲೋಕಸಭೆ ಚುನಾವಣೆ ನಡೆದರೂ ಎನ್ ಡಿಎ ಬಹುಮತ ಪಡೆಯಲಿದೆ ಎಂದು ನೂತನ ಸಮೀಕ್ಷೆಯೊಂದು ಹೇಳಿದೆ.
'ಇಂಡಿಯಾ ಟುಡೇ-ಕಾರ್ವಿ' ನಡೆಸಿದ ನೂತನ ಸಮೀಕ್ಷೆ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಈಗಲೂ ಜನಪ್ರಿಯ ನಾಯಕರಾಗಿ ಮತದಾರರ ಮನದಲ್ಲಿ ಉಳಿದುಕೊಂಡಿದ್ದು, ಈಗ ಚುನಾವಣೆ ನಡೆದರೆ ಎನ್ ಡಿಎ 304 ಸ್ಥಾನಗಳೊಂದಿಗೆ ಪುನಃ ಬಹುಮತ ಗಳಿಸಲಿದೆ ಎಂದು ಹೇಳಿದೆ.
ಜನಪ್ರಿಯ ಪ್ರಧಾನಿ ಅಭ್ಯರ್ಥಿಗಳಲ್ಲಿ ನರೇಂದ್ರ ಮೋದಿ ಶೇ.50, ರಾಹುಲ್ ಗಾಂಧಿ ಕೇವಲ ಶೇ.13 ಮತ ಪಡೆದಿದ್ದಾರೆ. ಶೇಕಡಾವಾರು ಮತದಲ್ಲಿ ಎನ್‌ಡಿಎ 40, ಯುಪಿಎ 26, ಇತರರು 36 ಮತ ಪಡೆಯಲಿದ್ದಾರೆ.
ಎನ್‌ಡಿಎ 2014ರ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ 32 ಸೀಟು ಕಡಮೆ ಗಳಿಸಲಿದ್ದರೂ ಬಹುಮತ ಪಡೆಯಲಿದೆ. ಕಾಂಗ್ರೆಸ್ 35 ಸೀಟು ಸಾಮರ್ಥ್ಯ ವೃದ್ಧಿಸಿಕೊಂಡು 94 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.
ನಿತೀಶ್ ನಂ.1: ಜನಪ್ರಿಯ ಸಿಎಂಗಳಲ್ಲಿ ಬಿಹಾರದ ನಿತೀಶ್ ಕುಮಾರ್ ಮೊದಲ ಸ್ಥಾನಿ ಯಾಗಿದ್ದು, 87 ಅಂಕ ಪಡೆದಿದ್ದಾರೆ. ಮ.ಪ್ರ.ದ ಶಿವರಾಜ್ ಚೌಹಾಣ್ 81, ಛತ್ತೀಸ್‌ಗಢದ ರಮಣ್ ಸಿಂಗ್ 70 ಅಂಕ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


