ದೇಶ

ನೀಲ್ಗೈ, ಕೋತಿ, ಕಾಡು ಹಂದಿ ಹತ್ಯೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬಿಹಾರ ರೈತರ ಬೆಳೆ ನಾಶ ಮಾಡುತ್ತಿದ್ದ ನೀಲ್ಗೈ (ನೀಲ್ ಜಿಂಕೆ), ಹಿಮಾಚಲ ಪ್ರದೇಶದ ಕೆನ್ನೆ ಚೀಲ, ಉದ್ದ ಬಾಲದ ಕೋತಿ ಮತ್ತು ಉತ್ತರಾಖಂಡದ ಕಾಡುಹಂದಿಗಳ ಸಾಮೂಹಿಕ ಹತ್ಯೆ ಸಂಬಂಧ ಹೊರಡಿಸಲಾಗಿದ್ದ ಸರ್ಕಾರ ಪ್ರಕರಣೆಗಳನ್ನು ಪ್ರಶ್ನಿಸಿ...

ನೀಲ್ಗೈ, ಕೋತಿ, ಕಾಡು ಹಂದಿ ಹತ್ಯೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ನೀಲ್ಗೈ, ಕೋತಿ, ಕಾಡುಹಂದಿ
Published On :

ನವದೆಹಲಿ: ಬಿಹಾರ ರೈತರ ಬೆಳೆ ನಾಶ ಮಾಡುತ್ತಿದ್ದ ನೀಲ್ಗೈ (ನೀಲ್ ಜಿಂಕೆ), ಹಿಮಾಚಲ ಪ್ರದೇಶದ ಕೆನ್ನೆ ಚೀಲ, ಉದ್ದ ಬಾಲದ ಕೋತಿ ಮತ್ತು ಉತ್ತರಾಖಂಡದ ಕಾಡುಹಂದಿಗಳ ಸಾಮೂಹಿಕ ಹತ್ಯೆ ಸಂಬಂಧ ಹೊರಡಿಸಲಾಗಿದ್ದ ಸರ್ಕಾರ ಪ್ರಕರಣೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.

ಈ ಮೂರು ಪ್ರಾಣಿ ಪ್ರಭೇದಗಳು ಮಾನವರಿಗೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಠಿಸಲು ಆರಂಭಿಸಿವೆ. ಆದ್ದರಿಂದ ಸೀಮಿತ ಅವಧಿಗೆ ಅವುಗಳನ್ನು ಕೊಲ್ಲಲು ಆದೇಶ ನೀಡಲಾಗಿದೆ ಎಂದು ಸರ್ಕಾರ ಹೈಕೋರ್ಟ್ ಗೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಪ್ರಾಣಿಗಳ ಹಕ್ಕುಗಳ ಹೋರಾಟಗಾರರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ನೀಲ್ಗೈ (ನೀಲ್ ಜಿಂಕೆ), ಹಿಮಾಚಲ ಪ್ರದೇಶದ ಕೆನ್ನೆ ಚೀಲ, ಉದ್ದ ಬಾಲದ ಕೋತಿ ಮತ್ತು ಉತ್ತರಾಖಂಡದ ಕಾಡುಹಂದಿಗಳ ಸಾಮೂಹಿಕ ಹತ್ಯೆಗೆ ತಡೆ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಅರಣ್ಯದಿಂದ ಹೊರಗೆ ಮನುಷ್ಯರಿಗೆ ಕಾಟ ಕೊಡುವ ಪ್ರದೇಶಗಳಲ್ಲಿ ಈ ಪ್ರಾಣಿಗಳನ್ನು ಕೊಲ್ಲಲಾಗುವುದು ಎಂದು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು ನೀಡಿದ ಹೇಳಿಕೆಯನ್ನು ಸುಪ್ರೀಂಕೋರ್ಟ್ ದಾಖಲಿಸಿತ್ತು.

ಪರಿಸರ ಮತ್ತು ಅರಣ್ಯಗಳ ಸಚಿವಾಲಯದ ಅಡಿಯಲ್ಲಿ ಬರುವ ಪಶು ಕಲ್ಯಾಣ ಇಲಾಖೆಯು ಅರ್ಜಿದಾರರನ್ನು ಬೆಂಬಲಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.