ದೇಶ

ಹಫೀಜ್ ಸಯೀದ್ ವಿರುದ್ಧ ಫತ್ವಾ: ಮುಸ್ಲಿಮರಿಂದ ಉತ್ತಮ ಸಂದೇಶ ಎಂದ ಕಾಂಗ್ರೆಸ್

ಮುಂಬೈ ದಾಳಿಯ ಪ್ರಮುಖ ರುವಾರಿ ಹಾಗೂ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯಿದಾ ವಿರುದ್ಧ ಇಸ್ಲಾಮಿಕ್ ಸೆಮಿನರಿ ಹೊರಡಿಸಿರುವ...

ಹಫೀಜ್ ಸಯೀದ್ ವಿರುದ್ಧ ಫತ್ವಾ: ಮುಸ್ಲಿಮರಿಂದ ಉತ್ತಮ ಸಂದೇಶ ಎಂದ ಕಾಂಗ್ರೆಸ್
ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್
Published On :

ನವದೆಹಲಿ: ಮುಂಬೈ ದಾಳಿಯ ಪ್ರಮುಖ ರುವಾರಿ ಹಾಗೂ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಇಸ್ಲಾಮಿಕ್ ಸೆಮಿನರಿ ಹೊರಡಿಸಿರುವ ಫತ್ವಾವನ್ನು ಕಾಂಗ್ರೆಸ್ ಸ್ವಾಗತಿಸಿದೆ.

ಹಫೀಜ್ ವಿರುದ್ಧ ಹೊರಡಿಸಲಾಗಿರುವ ಫತ್ವಾ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಟಾಮ್ ವಡಕ್ಕನ್ ಅವರು, ಮುಸ್ಲಿಂ ನಾಯಕತ್ವದಲ್ಲಿ ಈ ರೀತಿಯ ಉಗ್ರರನ್ನು ನಿರ್ಮೂಲನೆ ಮಾಡಬೇಕಿದೆ. ಇದೊಂದು ಒಪ್ಪುವಂತಹ ಪ್ರಕರಣವಾಗಿದೆ.

ಒಬ್ಬ ಮುಸ್ಲಿಂ ನಾಯಕ ಹಾಗೂ ಉಗ್ರನ ವಿರುದ್ಧ ಮೊದಲ ಬಾರಿಗೆ ಫತ್ವಾವವನ್ನು ಹೊರಡಿಸಲಾಗಿದೆ ಪಾಕಿಸ್ತಾನದಲ್ಲಿ ಕುಳಿತು ಭಾರತದ ವಿರುದ್ಧ ವಿಧ್ವಂಸಕ ಕೃತ್ಯವೆಸಗುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ಫತ್ವಾ ಉತ್ತಮ ಸಂದೇಶವಾಗಿದೆ ಎಂದು ಹೇಳಿದ್ದಾರೆ.

ಉತ್ತರಪ್ರದೇಶ ಬರೇಲ್ವಿ ಪಂಥದ ಇಸ್ಲಾಂ ಧಾರ್ಮಿಕ ಸಂಸ್ಥೆಯೊಂದು ಹಫೀಜ್ ಸಯೀದ್ ವಿರುದ್ಧ ಫತ್ವಾವೊಂದನ್ನು ಹೊರಡಿಸಿತ್ತು. ಮುಫ್ತಿ ಮೊಹಮ್ಮದ್ ಸಲೀಂ ಬರೇಲ್ವಿ ಎಂಬ ಇಸ್ಲಾಂ ವಿದ್ವಾಂಸ ಹಫೀಜ್ ವಿರುದ್ಧ ಫತ್ವಾ ಹೊರಡಿಸಿದ್ದಾರೆ.

ಮುಸ್ಲಿಮರು ಸಯೀದ್ ನನ್ನು ಎಂದಿಗೂ ಪರಿಗಣಿಸಬಾರದು, ಆತನ ಸಿದ್ದಾಂತಗಳನ್ನು ಪಾಲನೆ ಮಾಡಬಾರದು. ಸಯೀದ್ ನನ್ನು ಇಸ್ಲಾಂ ಧರ್ಮದಿಂದ ಹೊರಹಾಕಲಾಗಿದೆ. ಆತನೊಬ್ಬ ಇಸ್ಲಾಂ ವಿರೋಧಿಯಾಗಿದ್ದು ಆತನನ್ನು ಹಿಂಬಾಲಿಸುವುದು ಮತ್ತು ಮುಸ್ಲಿಂನೆಂದು ಪರಿಗಣಿಸುವುದು ಅಕ್ರಮ ಹಾಗೂ ಅಪರಾಧವಾಗಿದೆ ಎಂದು ಫತ್ವಾದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.