ದೇಶ

ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಗುಜರಾತ್ ನ ಹೆಟ್ ಶಾ ದೇಶಕ್ಕೆ ಪ್ರಥಮ

ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ದೇಶಾದ್ಯಂತ ಏಕರೂಪ ಪರೀಕ್ಷೆ ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ...

ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಗುಜರಾತ್ ನ ಹೆಟ್ ಶಾ ದೇಶಕ್ಕೆ ಪ್ರಥಮ
ನೀಟ್ ಟಾಪರ್ ಗುಜರಾತ್ ನ ಹೆಟ್ ಶಾ
Published On :
ನವದೆಹಲಿ: ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ದೇಶಾದ್ಯಂತ ಏಕರೂಪ ಪರೀಕ್ಷೆ ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್) ನ ಫಲಿತಾಂಶವನ್ನು ನಿನ್ನೆ(ಮಂಗಳವಾರ) ಸಿಬಿಎಸ್ ಇ ಪ್ರಕಟಿಸಿದೆ. ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ಎರಡು ಹಂತಗಳಲ್ಲಿ ನಡೆಸಲಾಗಿದ್ದ ಪರೀಕ್ಷಾ ಫಲಿತಾಂಶವನ್ನು ಒಟ್ಟಿಗೆ ಪ್ರಕಟಿಸಲಾಗಿದೆ. 
ಗುಜರಾತ್ ನ ಹೆಟ್ ಶಾ ದೇಶಕ್ಕೆ ಪ್ರಥಮರಾಗಿ ಹೊರಹೊಮ್ಮಿದ್ದಾರೆ. ಮೇ ಮತ್ತು ಜುಲೈ ತಿಂಗಳಲ್ಲಿ ನಡೆಸಲಾದ ಎರಡು ಹಂತಗಳ ಪರೀಕ್ಷೆಯಲ್ಲಿ  8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 4 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಹುಡುಗಿಯರೇ ಹುಡುಗರಿಗಿಂತ ಫಲಿತಾಂಶದಲ್ಲಿ ಮುಂದಿದ್ದಾರೆ ಎಂದು ಸಿಬಿಎಸ್ ಇ ತಿಳಿಸಿದೆ.
ಒಟ್ಟು 720 ಅಂಕಗಳಲ್ಲಿ 685 ಅಂಕ ಗಳಿಸುವ ಮೂಲಕ ಹೆಟ್ ಶಾ ದೇಶಕ್ಕೆ ಮೊದಲಿಗನಾದರೆ, ಏಕಾಂಶ ಗೋಯಲ್(682 ಅಂಕ), ನಿಖಿಲ್ ಬಾಜಿಯಾ(678 ಅಂಕ) ಗಳಿಸುವ ಮೂಲಕ ದ್ವಿತೀಯ, ತೃತೀಯ ಅಂಕ ಗಳಿಸಿದ್ದಾರೆ.
www.aipmt.nic.in, www.cbse.nic.in ಮತ್ತು www.cbseresults.nic.in ಮೂಲಕ ಫಲಿತಾಂಶ ವೀಕ್ಷಿಸಬಹುದು. ಅಲ್ಲದೆ ಕೇಂದ್ರದ ಡಿಜಿಲಾಕರ್ ವೆಬ್ ಸೈಟ್ http://results.digilocker.gov.in ಮೂಲಕ ಕೂಡ ರಿಸಲ್ಟ್ ನೋಡಬಹುದು.
ದೇಶ ಮಟ್ಟದಲ್ಲಿ ಶೇಕಡಾ 15ರಷ್ಟು ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಸಿಬಿಎಸ್ ಇ ನೀಟ್ ರ್ಯಾಂಕ್ ಪತ್ರವನ್ನು ಡಿಜಿ ಲಾಕರ್ ಮೂಲಕ ಕಳುಹಿಸಲಿದೆ.  ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳು ಇನ್ನು ಸಂಬಂಧಪಟ್ಟ ಸಲಹಾಧಿಕಾರಿಗಳ ಬಳಿ ಪ್ರವೇಶ ಪ್ರಕ್ರಿಯೆಯ ವಿಧಿವಿಧಾನಗಳನ್ನು ಭರ್ತಿ ಮಾಡಬೇಕು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.