ದೇಶ

ಸಹೋದರಿಯ ಮಗನ ಮದುವೆಗೆ ದಾವೂದ್ ಇಬ್ರಾಹಿಂ ಸ್ಕೈಪ್ ಮೂಲಕ ಶುಭಾಶಯ!

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಬುಧವಾರ ಮುಂಬೈಯಲ್ಲಿ ನಡೆಯುವ ತನ್ನ ಸೋದರಿ ಹಸೀನಾ ಪಾರ್ಕರ್‌ ಳ ಕೊನೆಯ ಪುತ್ರ ಅಲಿಶಾ...

ಸಹೋದರಿಯ ಮಗನ ಮದುವೆಗೆ ದಾವೂದ್ ಇಬ್ರಾಹಿಂ ಸ್ಕೈಪ್ ಮೂಲಕ ಶುಭಾಶಯ!
ದಾವೂದ್ ಇಬ್ರಾಹಿಂ
Published On :
ಮುಂಬೈ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಬುಧವಾರ ಮುಂಬೈಯಲ್ಲಿ ನಡೆಯುವ ತನ್ನ ಸೋದರಿ ಹಸೀನಾ ಪಾರ್ಕರ್‌ ಳ ಕೊನೆಯ ಪುತ್ರ ಅಲಿಶಾ ಪಾರ್ಕರ್‌ ನ ಮದುವೆಯಲ್ಲಿ ಭಾಗವಹಿಸುತ್ತಿದ್ದಾನೆ. ಆದರೆ ಸ್ಕೈಪ್‌ ಮೂಲಕ!
ನಾಳೆ ಬೆಳಗ್ಗೆ ದಕ್ಷಿಣ ಮುಂಬೈನ ರಸೂಲ್‌ ಮಸೀದಿಯಲ್ಲಿ ಮೆಮೋನ್‌ ಕುಟುಂಬಕ್ಕೆ ಸೇರಿದ ಆಯೆಷಾ ನಗಾನಿ ಜತೆಗೆ ಅಲಿಶಾ ಪಾರ್ಕರ್‌ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಸಂಜೆ ಜುಹುವಿನಲ್ಲಿರುವ ಟ್ಯುಲಿಪ್‌ ಸ್ಟಾರ್‌ ಹೊಟೇಲ್‌ನಲ್ಲಿ ಸತ್ಕಾರ ಕೂಟ ಆಯೋಜಿಸಲಾಗಿದೆ. ಮುಂಬೈಯಲ್ಲಿ ಕಟ್ಟಡ ನಿರ್ಮಾಣ ಉದ್ಯಮದಲ್ಲಿ ತೊಡಗಿಕೊಂಡಿರುವ ಅಲಿಶಾ, ತಾಯಿ ಹಸೀನಾ ಅವರ ಬದುಕುಳಿದಿರುವ ಏಕೈಕ ಪುತ್ರನಾಗಿದ್ದಾನೆ.
ದಾವೂದ್ ಇಬ್ರಾಹಿಂ ನಿಕಟವರ್ತಿ ಭೂಗತ ಜಗತ್ತಿನ ಪಾತಕಿಗಳು ಒಂದೊಮ್ಮೆ ಈ ವಿವಾಹ ಸಮಾರಂಭಕ್ಕೆ ಆಗಮಿಸಿದರೆ, ಅವರನ್ನು ವಶಕ್ಕೆ ತೆಗೆದುಕೊಳ್ಳುವ ಯೋಜನೆಯ ಅಂಗವಾಗಿ ಸಮಾರಂಭಕ್ಕೆ ಬರುವ ಅತಿಥಿಗಳ ಮೇಲೆ ತೀವ್ರ ಕಣ್ಗಾವಲು ಇರಿಸುವಂತೆ ಮುಂಬೈ ಕ್ರೈಂ ಬ್ರಾಂಚ್‌, ಸುಲಿಗೆ ನಿಗ್ರಹ ದಳ ಹಾಗೂ ಯೂನಿಟ್‌ 1ರ ಸಿಬ್ಬಂದಿಗಳನ್ನು ಕೇಳಿಕೊಂಡಿರುವುದಾಗಿ ವರದಿಯಗಿದೆ. 
1993ರ ಮುಂಬೈ ಸರಣಿ ಬಾಂಬ್‌ ಸ್ಫೋಟದ ಪ್ರಮುಖ ಆರೋಪಿಯಾಗಿರುವ ದಾವೂದ್‌, ಪಾಕಿಸ್ತಾನದಲ್ಲಿ(ಕರಾಚಿಯಲ್ಲಿ) ಅಡಗಿಕೊಂಡಿರುವುದಾಗಿ ನಂಬಲಾಗಿದೆ. ಭಾರತವು ಪಾಕಿಸ್ಥಾನಕ್ಕೆ ಈಗಾಗಲೇ ಹಲವಾರು ಬಾರಿ ದಾವೂದ್‌ನ ಪಾಸ್‌ಪೋರ್ಟ್‌ ಮಾಹಿತಿಗಳನ್ನು ಕೊಡುವಂತೆ ಕೇಳಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.