ನೋಯ್ಡಾ ಹೌಸಿಂಗ್ ಯೋಜನೆ: ಗ್ರಾಹಕರಿಗೆ ಹಣ ವಾಪಸ್ ಮಾಡುವಂತೆ "ಸುಪ್ರೀಂ" ಸೂಚನೆ
ಪ್ರಮುಖ ಬೆಳವಣಿಗೆಯೊಂದರಲ್ಲಿ ನೋಯ್ಡಾ ಹೌಸಿಂಗ್ ಯೋಜನೆ ಪ್ರಕರಣ ಸಂಬಂಧ ಗ್ರಾಹಕರಿಗೆ ಹಣ ವಾಪಸ್ ಮಾಡುವಂತೆ ಸುಪ್ರೀಂ ಕೋರ್ಟ್ ಖ್ಯಾತ ನಿರ್ಮಾಣ ಸಂಸ್ಥೆ ಯೂನಿಟೆಕ್ ಗೆ ಸೂಚನೆ ನೀಡಿದೆ.

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ನೋಯ್ಡಾ ಹೌಸಿಂಗ್ ಯೋಜನೆ ಪ್ರಕರಣ ಸಂಬಂಧ ಗ್ರಾಹಕರಿಗೆ ಹಣ ವಾಪಸ್ ಮಾಡುವಂತೆ ಸುಪ್ರೀಂ ಕೋರ್ಟ್ ಖ್ಯಾತ ನಿರ್ಮಾಣ ಸಂಸ್ಥೆ ಯೂನಿಟೆಕ್ ಗೆ ಸೂಚನೆ ನೀಡಿದೆ.
ನೋಯ್ಡಾ ಹೌಸಿಂಗ್ ವಿವಾದ ಸಂಬಂಧ ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಸಿ ನಾಗಪ್ಪನ್ ಅವರ ನೇತೃತ್ವದ ದ್ವಿಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದ್ದು, ಕೂಡಲೇ ಗ್ರಾಹಕರಿಗೆ ಹಣ ವಾಪಸ್ ಮಾಡುವಂತೆ ಸೂಚನೆ ನೀಡಿದೆ. ಅಂತೆಯೇ ಹಣ ಪಡೆದು ನಿಗದಿತ ಸಮಯದೊಳಗೆ ನಿವಾಸಗಳನ್ನು ನೀಡದ ಹಿನ್ನಲೆಯಲ್ಲಿ ಯೂನಿಟೆಕ್ ಸಂಸ್ಥೆಯನ್ನು ನ್ಯಾಯಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ ಆಗಸ್ಟ್ 12ರೊಳಗೆ ಗ್ರಾಹಕರಿಗೆ ಹಣ ವಾಪಸ್ ನೀಡದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನು ಜೈಲಿಗಟ್ಟುವುದಾಗಿ ಎಚ್ಚರಿಕೆ ನೀಡಿದೆ. ಅಂತೆಯೇ ಮುಂದಿನ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿದೆ.
ಅಂತೆಯೇ ಯೂನಿಟೆಕ್ ಸಂಸ್ಥೆಯಿಂದ ನಿವಾಸಗಳನ್ನು ಕೊಂಡಿರುವ ಗ್ರಾಹಕರು ಆಗಸ್ಟ್ 17ರೊಳಗೆ ತಮ್ಮ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ನೋಯ್ಡಾ ಮತ್ತು ಗುರಗಾಂವ್ ನಲ್ಲಿ ಯೂನಿಟೆಕ್ ಸಂಸ್ಥೆ ಬೃಹತ್ ಹೌಸಿಂಗ್ ಯೋಜನೆಯನ್ನು ಕೈಗೊಂಡಿದ್ದು, ಸುಮಾರು 24 ಅಧಿಕ ಮಂದಿ ಗ್ರಾಹಕರು ನಿವೇಶನಗಳನ್ನು ಕೊಂಡಿದ್ದರು. ಆದರೆ ಸಂಸ್ಥೆ ತಾನು ಘೋಷಿಸಿದ ಕಾಲಾವಕಾಶದೊಳಗೆ ನಿವೇಶನ ನೀಡಲು ವಿಫಲವಾದ್ದರಿಂದ ಹಲವರು ಗ್ರಾಹಕ ರಕ್ಷಣಾ ವೇದಿಕೆಯ ಮೊರೆ ಹೋಗಿದ್ದರು. ಅಲ್ಲದೆ ಹಲವು ಗ್ರಾಹಕರು ತಮ್ಮ ಹಣ ವಾಪಸ್ ಮಾಡುವಂತೆ ಆಗ್ರಹಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಗ್ರಾಹಕ ರಕ್ಷಣಾ ನ್ಯಾಯಾಲಯ ಯೂನಿಟೆಕ್ ಸಂಸ್ಥೆಗೆ 5 ಕೋಟಿ ಮಧ್ಯಂತರ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಯೂನಿಟೆಕ್ ಸಂಸ್ಥೆ ಸುಪ್ರೀಂ ಕೋಟ್ ಮೆಟ್ಟಿಲೇರಿತ್ತು. ಇದೀಗ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಗ್ರಾಹಕರಿಗೆ ಹಣ ಮರಳಿಸುವಂತೆ ಆದೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


