ಮೋದಿ ಅಂಕಲ್, ನನ್ನ ಶಾಲೆಗಿಂತ ನಿಮ್ಮ ರ್ಯಾಲಿಯೇ ಹೆಚ್ಚಾಯ್ತೇ?
ಮೋದಿ ಅಂಕಲ್, ನಿಮಗೆ ನನ್ನ ಶಾಲೆಗಿಂತ ನಿಮ್ಮ ರ್ಯಾಲಿಯೇ ಹೆಚ್ಚಾಯಿತೆ ಎಂದು ಪ್ರಶ್ನಿಸಿ 8ನೇ ತರಗತಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ...

ಖಾಂದ್ವಾ: ಮೋದಿ ಅಂಕಲ್, ನಿಮಗೆ ನನ್ನ ಶಾಲೆಗಿಂತ ನಿಮ್ಮ ರ್ಯಾಲಿಯೇ ಹೆಚ್ಚಾಯಿತೆ ಎಂದು ಪ್ರಶ್ನಿಸಿ 8ನೇ ತರಗತಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾನೆ.
ಸ್ವಾತಂತ್ರ್ಯ ಚಳವಳಿಯ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ್ ಆಜಾದ್ ಹುಟ್ಟೂರು, ಮಧ್ಯಪ್ರದೇಶದ ಬಾಬ್ರಾಗೆ ಪ್ರಧಾನಿ ಮೋದಿ ಇಂದು ಭೇಟಿ ನೀಡಿ, ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.
ರ್ಯಾಲಿಗೆ ಜನಗಳನ್ನು ಕರೆತರಲು ಹೆಚ್ಚಿನ ವಾಹನಗಳ ಅವಶ್ಯಕತೆಯಿದ್ದು, ರ್ಯಾಲಿಗಾಗಿ ಎಲ್ಲಾ ವಾಹನಗಳನ್ನು ಬಳಸಿಕೊಳ್ಳಲು ಜಿಲ್ಲಾಡಳಿಡ ನಿರ್ಧರಿಸಿ, ವಾಹನಗಳನ್ನು ಪಡೆದುಕೊಂಡಿದೆ.
ಮೋದಿ ರ್ಯಾಲಿಗಾಗಿ ಎಲ್ಲಾ ವಾಹನಗಳು ತೆರಳುವ ಹಿನ್ನೆಲೆಯಲ್ಲಿ ಆಗಸ್ಟ್ 9 ಮತ್ತು 10 ರಂದು ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಶಾಲೆಯ ಶಿಕ್ಷಕರು ಖಾಂದ್ವಾದಲ್ಲಿರುವ ವಿದ್ಯಾಕುಂಜ್ ಶಾಲೆಯ ವಿದ್ಯಾರ್ಥಿ ದಿವಾಂಶ್ ಜೈನ್ ಗೆ ತಿಳಿಸಿದ್ದಾರೆ. ಇದರಿಂದ ಬೇಸರಗೊಂಡ ದಿವಾಂಶ್ ಜೈನ್ ಪ್ರಧಾನಿ ನರೇಂದ್ರ ಮೋದಿ ಅವರ ವಿಳಾಸಕ್ಕೆ ಪತ್ರ ಬರೆದಿದ್ದಾನೆ.
ಮೋದಿ ಅಂಕಲ್, ನಿಮ್ಮ ಸಭೆ ನನ್ನ ಶಾಲೆಗಿಂತ ಹೆಚ್ಚು ಮುಖ್ಯನಾ? ನೀವು ಅಮೆರಿಕಾದಲ್ಲಿ ಮಾಡಿದ ಭಾಷಣ ನಾನು ಕೇಳಿದ್ದೇನೆ, ಅಲ್ಲಿ ಸಾವಿರಾರು ಜನ ನಿಮ್ಮ ಭಾಷಣ ಕೇಳಲಲು ಬಂದಿದ್ದರು, ಅವರೆಲ್ಲಾ ಶಾಲಾ ವಾಹನಗಳನ್ನು ಬಳಸಿಕೊಂಡು ಕಾರ್ಯಕ್ರಮಕ್ಕೆ ಬಂದಿದ್ದರಾ ಎಂದು ಪ್ರಶ್ನಿಸಿದ್ದಾನೆ.
ದೀವಾಂಶ್ ಜೈನ್ ಪ್ರಧಾನಿ ಮೋದಿ ಅವರ ಅಭಿಮಾನಿಯಾಗಿದ್ದು, ಎಲ್ಲಾ ಮನ್ ಕೀ ಬಾತ್ ಗಳನ್ನು ಕೇಳಿಸಿಕೊಂಡಿದ್ದಾನಂತೆ. ವಿದ್ಯಾರ್ಥಿಯ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದ್ದು, ಮೋದಿ ರ್ಯಾಲಿಗೆ ಶಾಲಾ ಬಸ್ ಗಳನ್ನು ಬಳಸಿಕೊಳ್ಳದಂತೆ ಸೂಚಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


