ದೇಶ

ನರೇಂದ್ರ ಮೋದಿ ಫೋಟೋ, ಹೆಸರು ಬಳಸಿ ಸಿಆರ್ ಪಿಎಫ್ ನೌಕರಿಗೆ ಅರ್ಜಿ ಹಾಕಿದ ಭೂಪ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರು ಮತ್ತು ಫೋಟೋ ಬಳಸಿ ಸಿಆರ್ ಪಿಎಫ್ ನೌಕರಿಗೆ ವ್ಯಕ್ತಿಯೊಬ್ಬ ಅರ್ಜಿ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ...

ನರೇಂದ್ರ ಮೋದಿ ಫೋಟೋ, ಹೆಸರು ಬಳಸಿ ಸಿಆರ್ ಪಿಎಫ್ ನೌಕರಿಗೆ ಅರ್ಜಿ ಹಾಕಿದ ಭೂಪ!
ನರೇಂದ್ರ ಮೋದಿ
Published On :

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರು ಮತ್ತು ಫೋಟೋ ಬಳಸಿ ಸಿಆರ್ ಪಿಎಫ್ ನೌಕರಿಗೆ ವ್ಯಕ್ತಿಯೊಬ್ಬ ಅರ್ಜಿ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಸಿಆರ್ ಪಿಎಫ್ ನೇಮಕಾತಿ ಗೆ ಆನ್ ಲೈನ್ ನಲ್ಲಿ ಆರ್ಜಿ ಕರೆಯಲಾಗಿತ್ತು. ಈ ವೇಳೆ ಅನಾಮಧೇಯ ವ್ಯಕ್ತಿಯೊಬ್ಬ ಮೋದಿ ಅವರ ಫೋಟೋ ಹಾಗೂ ಹೆಸರಿನಲ್ಲಿ  ಆನ್ ಲೈನ್ ನಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದಾನೆ.

ಈ ಸಂಬಂಧ ಕೇಂದ್ರ ಅರೆಸೇನಾ ಪಡೆ, ಸೈಬರ್ ಅಪರಾಧ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದೆ. ದೆಹಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ದಳದ ಸೈಬರ್ ಕ್ರೈಂ ಘಟಕ ಪ್ರಕರಣದ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.