ದೇಶ

ಜಿಎಸ್ ಟಿಯಿಂದ ಟ್ಯಾಕ್ಸ್ ಟೆರರಿಸಂ ಅಂತ್ಯ, ಗ್ರಾಹಕನೇ ಕಿಂಗ್: ಪ್ರಧಾನಿ ಮೋದಿ

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಯಿಂದಾಗಿ ಟ್ಯಾಕ್ಸ್ ಟೆರರಿಸಂಗೆ ತೆರೆ ಬೀಳಲಿದೆ ಮತ್ತು ಇನ್ನುಮುಂದೆ ಗ್ರಾಹಕನೇ ದೊರೆ...

ಜಿಎಸ್ ಟಿಯಿಂದ ಟ್ಯಾಕ್ಸ್ ಟೆರರಿಸಂ ಅಂತ್ಯ, ಗ್ರಾಹಕನೇ ಕಿಂಗ್: ಪ್ರಧಾನಿ ಮೋದಿ
ನರೇಂದ್ರ ಮೋದಿ
Published On :
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಯಿಂದಾಗಿ ಟ್ಯಾಕ್ಸ್ ಟೆರರಿಸಂಗೆ ತೆರೆ ಬೀಳಲಿದೆ ಮತ್ತು ಇನ್ನುಮುಂದೆ ಗ್ರಾಹಕನೇ ದೊರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.
ಕಳೆದ ವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಸರಕು ಮತ್ತು ಸೇವಾ ತೆರಿಗೆಯ(ಜಿಎಸ್‌ಟಿ) ಮಸೂದೆಯನ್ನು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದ್ದು, ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ಜಿಎಸ್ ಟಿ ವಿಧೇಯಕ ಜಾರಿಗೆ ಸಹಕರಿಸಿದ ಎಲ್ಲಾ ರಾಜಕೀಯ ಪಕ್ಷಗಳಿಗೆ ಧನ್ಯವಾದ ಹೇಳಿದರು.
‘ಯಾರೋ ಒಬ್ಬರು ‘ಜನ್ಮ’ ನೀಡುತ್ತಾರೆ, ಮತ್ತೆ ಬೇರೆ ಯಾರೋ ‘ಪೋಷಿಸಿ ಸಲಹುತ್ತಾರೆ’ ಎಂಬುದು ನಿಜ. ಇದು ಯಾವುದೇ ಒಂದು ನಿರ್ದಿಷ್ಟ ಪಕ್ಷದ ವಿಜಯವಲ್ಲ. ತೆರಿಗೆ ಪರಿಸ್ಥಿತಿಗೆ ಸಂಬಂಧಿಸಿದಂತೆ ರಾಷ್ಟ್ರ ಕಂಡಿರುವ ಏಳು ಬೀಳುಗಳನ್ನು ಅರ್ಥ ಮಾಡಿಕೊಳ್ಳಲು ಇದೊಂದೇ ಉದಾಹರಣೆ ಸಾಕು. ಸುಮಾರು 90 ರಾಜಕೀಯ ಪಕ್ಷಗಳ ಸಹಮತದೊಂದಿಗೆ ಇಂದು ಜಿಎಸ್ ಟಿ ಜಾರಿಗೆ ಬರುತ್ತಿದೆ. ಇದು ಪ್ರಜಾತಾಂತ್ರಿಕ ತತ್ವಗಳ ವಿಜಯ. ಎಲ್ಲಾ ರಾಜಕೀಯ ಪಕ್ಷಗಳ ವಿಜಯ’ ಎಂದು ಮೋದಿ ಹೇಳಿದರು.
ಜಿಎಸ್​ಟಿ ಎಂಬುದರ ಅರ್ಥ ಗ್ರೇಟ್ ಸ್ಟೆಪ್ ಟವರ್ಡ್ಸ್ ಟ್ರಾನ್ಸಪಾರ್ಮೇಷನ್’, ‘ಗ್ರೇಟ್ ಸ್ಟೆಪ್ ಟವರ್ಡ್ಸ್ ಟ್ರಾನ್ಸಪರೆನ್ಸಿ’(ಪರಿವರ್ತನೆ ಮತ್ತು ಪಾರದರ್ಶಕತೆಯೆಡೆಗೆ ಮಹಾನ್ ಹೆಜ್ಜೆ) ಎಂದು ಜಿಎಸ್ ಟಿಗೆ ಹೊಸ ವ್ಯಾಖ್ಯಾನ ನೀಡಿದ ಪ್ರಧಾನಿ, ಭ್ರಷ್ಟಾಚಾರ ನಿಯಂತ್ರಿಸಲು ವ್ಯವಸ್ಥೆಯನ್ನು ಬಲಪಡಿಸಬಬೇಕಾಗಿದ್ದು, ಜಿಎಸ್ ಟಿ ಜಾರಿಯಿಂದ ಭ್ರಷ್ಟಾಚಾರ ಮತ್ತು ಕಪ್ಪು ಹಣಕ್ಕೆ ಮುಕ್ತಿ ದೊರೆಯಲಿದೆ ಎಂದರು.
ಜಿಎಸ್ ಟಿ ಜಾರಿಯಿಂದ ದೇಶಕ್ಕೆ ಬಹುದೊಡ್ಡ ಲಾಭ ದೊರೆಯಲಿದೆ. ಇದರಿಂದ ಬಡವರಿಗೂ ಸಾಲ ಸಿಗುವಂತಾಗುತ್ತದೆ. ಅಲ್ಲದೆ ಬಡವರ ಅಗತ್ಯ ವಸ್ತುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗುವುದು ಎಂದು ಮೋದಿ ಹೇಳಿದರು.
ಕೆಲ ಸಮಯದ ಹಿಂದೆ ತೆರಿಗೆಗೆ ಸಂಬಂಧಪಟ್ಟ ವಿಷಯ ಸುಪ್ರೀಂಕೋರ್ಟಿನ ಮುಂದೆ ಬಂದದ್ದು ನಿಮಗೆಲ್ಲ ನೆನಪಿರಬಹುದು. ವಿಷಯ ತೆಂಗಿನ ಕಾಯಿಯನ್ನು ಹಣ್ಣು ಅಂತ ಪರಿಗಣಿಸಬೇಕೇ ಅಥವಾ ತರಕಾರಿ ಎಂಬುದಾಗಿ ಪರಿಗಣಿಸಬೇಕೇ ಎಂಬುದಾಗಿತ್ತು. ಮುಖ್ಯಮಂತ್ರಿಯಾಗಿದ್ದ ನನ್ನ ಅನುಭವವು ನನಗೆ ರಾಜ್ಯಗಳ ಸಮಸ್ಯೆಗಳನ್ನು ಅತ್ಯಂತ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನೆರವಾಯಿತು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.