ದೇಶ

ಜಿಎಸ್ ಟಿ ಶೇ.18ಕ್ಕಿಂತ ಹೆಚ್ಚಾದರೆ ಅದನ್ನು ಕಾಂಗ್ರೆಸ್ ಆಡಳಿತದ ರಾಜ್ಯಗಳು ಒಪ್ಪುವುದಿಲ್ಲ: ಜೈರಾಮ್

ಸರಕು ಮತ್ತು ಸೇವಾ ತೆರಿಗೆ ದರ ಶೇಕಡಾ 18ರಿಂದ ಹೆಚ್ಚಾದರೆ ಅದನ್ನು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಒಪ್ಪುವುದಿಲ್ಲ...

ಜಿಎಸ್ ಟಿ ಶೇ.18ಕ್ಕಿಂತ ಹೆಚ್ಚಾದರೆ ಅದನ್ನು ಕಾಂಗ್ರೆಸ್ ಆಡಳಿತದ ರಾಜ್ಯಗಳು ಒಪ್ಪುವುದಿಲ್ಲ: ಜೈರಾಮ್
ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್
Published On :
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ದರ ಶೇಕಡಾ 18ರಿಂದ ಹೆಚ್ಚಾದರೆ ಅದನ್ನು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಪ್ರತಿಪಾದಿಸಿದ್ದಾರೆ. 
ನಾವು ಗ್ರಾಹಕ ಸ್ನೇಹಿ ಜಿಎಸ್ ಟಿ ಮಸೂದೆ ಪರವಾಗಿದ್ದು, ಹಣದುಬ್ಬರವನ್ನು ತಡೆಗಟ್ಟಬೇಕಾದರೆ ಕಡಿಮೆ ತೆರಿಗೆ ದರವಿರಬೇಕು. ಹಾಗಾಗಿ ಹೆಚ್ಚಿನ ತೆರಿಗೆ ದರವನ್ನು ನಾವು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ. 
ಅಂದರೆ ರಾಜ್ಯಸಭೆಯಲ್ಲಿ 122ನೇ ಸರಕು ಮತ್ತು ಸೇವಾ ತೆರಿಗೆ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗಿದ್ದರೂ ಕೂಡ ಅದರ ಬಗೆಗಿನ ವಿರೋಧ, ಅಸಮಾಧಾನ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ವಿರೋಧ ಪಕ್ಷಗಳು ತಮ್ಮ ಹೋರಾಟವನ್ನು ಮುಂದುವರಿಸುವ ಸೂಚನೆ ನೀಡಿದ್ದಾರೆ ಜೈರಾಮ್ ರಮೇಶ್.
ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಸರಕು ಮತ್ತು ಸೇವೆಗಳ ಮೇಲೆ ಏಕರೂಪ ತೆರಿಗೆ ಮಾದರಿಯೇ ಜಿಎಸ್ ಟಿ ಮಸೂದೆಯ ಪರಿಕಲ್ಪನೆ. ಪ್ರಸ್ತುತ ದೇಶದ 13 ರಾಜ್ಯಗಳಲ್ಲಿ ಬಿಜೆಪಿ/ಎನ್ ಡಿಎ ನೇತೃತ್ವದ ಆಡಳಿತವಿದ್ದು, 8 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.
ತಮಿಳುನಾಡು ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳು ಏಕರೂಪ ಸರಕು ಮತ್ತು ಸೇವಾ ತೆರಿಗೆಗೆ ಒಪ್ಪಿಕೊಂಡಿವೆ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅಂಗೀಕಾರಗೊಂಡಿರುವ ಮಸೂದೆ ಮುಂದಿನ ದಿನಗಲ್ಲಿ ಯಾವ ರೂಪದಲ್ಲಿ ಮಂಡನೆಯಾಗಲಿದೆ ಎಂಬುದನ್ನು ಕಾದುನೋಡಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.