ತ.ನಾಡಿನಲ್ಲಿ ಮತ್ತೊಂದು ಸ್ವಾತಿ ಪ್ರಕರಣ: ಬೆಂಕಿ ಹಚ್ಚಿಕೊಂಡು ಪ್ರಿಯತಮೆಯನ್ನು ತಬ್ಬಿಕೊಂಡ ಭಗ್ನ ಪ್ರೇಮಿ
ಟೆಕಿ ಸ್ವಾತಿ ಕೊಲೆ ಪ್ರಕರಣ ಹಸಿರಾಗಿರುವಾಗಲೇ ಭಗ್ನ ಪ್ರೇಮಿಯೋರ್ವ ಬೆಂಕಿ ಹಚ್ಚಿಕೊಂಡು ಬಳಿಕ ತನ್ನ ಪ್ರಿಯತಮೆಯನ್ನು ತಬ್ಬಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಧಾರುಣ ಘಟನೆ ಸಂಭವಿಸಿದೆ.

ಚೆನ್ನೈ: ಟೆಕಿ ಸ್ವಾತಿ ಕೊಲೆ ಪ್ರಕರಣ ಹಸಿರಾಗಿರುವಾಗಲೇ ಭಗ್ನ ಪ್ರೇಮಿಯೋರ್ವ ಬೆಂಕಿ ಹಚ್ಚಿಕೊಂಡು ಬಳಿಕ ತನ್ನ ಪ್ರಿಯತಮೆಯನ್ನು ತಬ್ಬಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಧಾರುಣ ಘಟನೆ ಸಂಭವಿಸಿದೆ.
ತಮಿಳುನಾಡಿನ ವಿಳ್ಳುಪುರಂನಲ್ಲಿ ಈ ಘಟನೆ ನಡೆದಿದ್ದು, ಸೆಂಥಿಲ್ ಎಂಬ 30 ವರ್ಷದ ವ್ಯಕ್ತಿ ನವೀನಾ ಎಂಬ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದ. ಆದರೆ ಬಾಲಕಿ ತನ್ನ ಪ್ರೀತಿಯನ್ನು ಒಪ್ಪಲ್ಲಿಲ್ಲ ಎಂಬ ಕಾರಣಕ್ಕೆ ಆಕೆಯ ಮನೆಗೇ ನುಗ್ಗಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಅಲ್ಲದೆ ಬಳಿಕ ಬಾಲಕಿಯನ್ನು ತಬ್ಬಿ ಹಿಡಿಯುವ ಮೂಲಕ ಆಕೆಯನ್ನೂ ಕೊಲ್ಲಲು ಯತ್ನಿಸಿದ್ದಾನೆ. ಘಟನೆಯಲ್ಲಿ ಭಗ್ನ ಪ್ರೇಮಿ ಸೆಂಥಿಲ್ ಸಾವನ್ನಪ್ಪಿದ್ದು, ಬಾಲಕಿ ನವೀನಾ ಮಾತ್ರ ಶೇ.80ರಷ್ಟು ಸುಟ್ಟ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ವಿಳ್ಳುಪುರಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ವಿವರ:
ಸುಮಾರು 32 ವರ್ಷದ ಸೆಂಥಿಲ್ ವೃತ್ತಿಯಲ್ಲಿ ಚಾಲಕನಾಗಿದ್ದು, ನವೀನಾ ಎಂಬ ಅಪ್ರಾಪ್ತ ಬಾಲಕಿಯನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ಈ ನಡುವೆ ಸೆಂಥಿಲ್ ರೈಲು ಅಪಘಾತವೊಂದರಲ್ಲಿ ತನ್ನ ಬಲಗೈ ಹಾಗೂ ಬಲಗಾಲು ಕಳೆದುಕೊಂಡಿದ್ದ. ಇದಾಗ್ಯೂ ಬಾಲಕಿಯ ಬಳಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ ಸೆಂಥಿಲ್ ಪ್ರೀತಿಯನ್ನು ಬಾಲಕಿ ತಿರಸ್ಕರಿಸಿದ್ದಳು. ಇದರಿಂದ ತೀವ್ರ ಕುಪಿತಗೊಂಡಿದ್ದ ಸೆಂಥಿಲ್, ತನ್ನ ಅಂಗವೈಕಲ್ಯದಿಂದಾಗಿ ಪ್ರೀತಿ ನಿರಾಕರಿಸುತ್ತಿದ್ದಾಳೆ ಎಂದು ಆರೋಪಿಸಿದ್ದ. ಅಲ್ಲದೆ ಕಳೆದ ಜುಲೈ 30ರಂದು ಬಾಲಕಿ ಮನೆ ಹತ್ತಿರ ಬಂದಿದ್ದ ಸೆಂಥಿಲ್ ಆಕೆಯ ಪೋಷಕರು ಹೊರಗೆ ಹೋಗುತ್ತಿದ್ದಂತೆಯೇ ಮನೆ ಪ್ರವೇಶ ಮಾಡಿದ್ದ. ಈ ವೇಳೆ ಬಾಲಕಿ ಸಹೋದರ ಸಂಬಂಧಿಗಳು ಮನೆಯಲ್ಲಿ ಇದ್ದರು.
ಅವರನ್ನು ಕತ್ತಿಯಿಂದ ಬೆದರಿಸಿ ಬಾಲಕಿ ನವೀನಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಅದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ತನ್ನ ಮೇಲೆಯೇ ಪೆಟ್ರೋಲ್ ಸುರಿದುಕೊಂಡು ಬಳಿಕ ಬಾಲಕಿ ನವೀನಾಳನ್ನು ಗಟ್ಟಿಯಾಗಿ ತಬ್ಬಿ ಹಿಡಿದಿದ್ದಾನೆ. ಘಟನೆಯಲ್ಲಿ ಭಗ್ನ ಪ್ರೇಮಿ ಸೆಂಥಿಲ್ ಸಾವನ್ನಪ್ಪಿದ್ದು, ಬಾಲಕಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


