ದೇಶ

ಚೀನಾ ತಲೆನೋವಿಗೆ "ಬ್ರಹ್ಮೋಸ್" ಪರಿಹಾರ: ಈಶಾನ್ಯ ಭಾರತದ ಗಡಿಯಲ್ಲಿ 100 ಕ್ಷಿಪಣಿ ನಿಯೋಜನೆಗೆ ಸಿದ್ಧತೆ

ಪದೇ ಪದೇ ಕಾಲು ಕೆರೆದು ಗಡಿಯಲ್ಲಿ ತಂಟೆ ಮಾಡುತ್ತಿರುವ ಚೀನಿ ಯೋಧರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈಶಾನ್ಯ ಭಾರತದ ಗಡಿಗಳಲ್ಲಿ ಇಂಡೋ-ರಷ್ಯಾ ಜಂಟಿ ನಿರ್ಮಾಣದ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿ ನಿಯೋಜನೆಗೆ ಅಸ್ತು ಎಂದಿದೆ.

ಚೀನಾ ತಲೆನೋವಿಗೆ "ಬ್ರಹ್ಮೋಸ್" ಪರಿಹಾರ: ಈಶಾನ್ಯ ಭಾರತದ ಗಡಿಯಲ್ಲಿ 100 ಕ್ಷಿಪಣಿ ನಿಯೋಜನೆಗೆ ಸಿದ್ಧತೆ
ಬ್ರಹ್ಮೋಸ್ ಕ್ಷಿಪಣಿ (ಸಂಗ್ರಹ ಚಿತ್ರ)
Published On :

ನವದೆಹಲಿ: ಪದೇ ಪದೇ ಕಾಲು ಕೆರೆದು ಗಡಿಯಲ್ಲಿ ತಂಟೆ ಮಾಡುತ್ತಿರುವ ಚೀನಿ ಯೋಧರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈಶಾನ್ಯ  ಭಾರತದ ಗಡಿಗಳಲ್ಲಿ ಇಂಡೋ-ರಷ್ಯಾ ಜಂಟಿ ನಿರ್ಮಾಣದ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿ ನಿಯೋಜನೆಗೆ ಅಸ್ತು ಎಂದಿದೆ.

ಮೂಲಗಳ ಪ್ರಕಾರ ಇಂಡೋ-ಚೀನಾ ಗಡಿಯಲ್ಲಿ ಚೀನೀ ಸೈನಿಕರ ಚಟುವಟಿಕೆಗಳು ದಿನೇ ದಿನೇ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಇದನ್ನು ನಿಯಂತ್ರಿಸುವ ಉದ್ದೇಶದಿಂದ  ಭಾರತೀಯ ಸೇನೆ ಮಹತ್ವದ ಪ್ರಸ್ತಾಪವೊಂದನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದು, ಸೇನೆಯ ಪ್ರಸ್ತಾಪಕ್ಕೆ ಕೇಂದ್ರ ಕೂಡ ಅಸ್ತು ಎಂದಿದೆ. ಅದರಂತೆ ಇಂಡೋ-ಚೀನಾ ಗಡಿಗಳಲ್ಲಿ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಈ ಹಿಂದೆ ನಡೆದ ಭದ್ರತಾ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಈಶಾನ್ಯ ಭಾರತ ಗಡಿಯಲ್ಲಿ ಬ್ರಹ್ನೋಸ್ ಕ್ಷಿಪಣಿ ನಿಯೋಜಿಸುವ  ಸೇನಾಧಿಕಾರಿಗಳ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದರು. ಇನ್ನು ಈ ಯೋಜನೆಗಾಗಿ ಕೇಂದ್ರ ಸರ್ಕಾರ ಮತ್ತು ಕೇಂದ್ರ ರಕ್ಷಣಾ ಇಲಾಖೆ ಸುಮಾರು 4.300 ಕೋಟಿ ರು.ಗಳ ಯೋಜನೆಯನ್ನು  ಕೈಗೆತ್ತಿಕೊಂಡಿದ್ದು, ಈಶಾನ್ಯ ಭಾರತದ ವಿವಿಧ ಗಡಿಗಳಲ್ಲಿರುವ ಸೇನಾ ಕ್ಯಾಂಪ್ ಗಳಿಗೆ 100 ಕ್ಕೂ ಹೆಚ್ಚು ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜಿಸಲಿದೆ.

290 ಕಿ.ಮೀ ಸಾಮರ್ಥ್ಯದ ಬ್ರಹ್ಮೋಸ್ ಕ್ಷಿಪಣಿಗಳು ಖಂಡಾಂತರ ದಾಳಿ, ವಾಯು ದಾಳಿ ಮತ್ತು ಗಾಳಿಯಿಂದ ಭೂಮಿ ಮೇಲೆ ದಾಳಿ ಮಾಡುವ ಸಾಮರ್ಥ್ಯಹೊಂದಿದೆ. ಅಲ್ಲದೆ ಬಳಕೆದಾರ ಸ್ನೇಹಿ  ಕ್ಷಿಪಣಿಯಾಗಿರುವ ಈ ಬ್ರಹ್ಮೋಸ್ ಕ್ಷಿಪಣಿಯನ್ನು ಭೂಮಿ, ಜಲ ಮತ್ತು ವಾಯು ಭಾಗದಿಂದಲೂ ಸುಲಭವಾಗಿ ಶುತ್ರಪಾಳಯದ ಮೇಲೆ ಉಡಾಯಿಸ ಬಹುದಾಗಿದೆ. ಬ್ರಹ್ಮೋಸ್ ಕ್ಷಿಪಣಿಯನ್ನು  ಭಾರತ ಮತ್ತು ರಷ್ಯಾ ದೇಶಗಳು ಜಂಟಿಯಾಗಿ ನಿರ್ಮಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.