ಗ್ರಾಮಗಳನ್ನು ದತ್ತು ಪಡೆಯದ ಸಂಸದರಿಗೆ ಕೇಂದ್ರ ಸರ್ಕಾರದಿಂದಲೇ ತಕ್ಕ ಪಾಠ
ಸಂಸದರ ಆದರ್ಶ ಗ್ರಾಮ ಯೋಜನೆ(ಎಸ್ಎಜಿವೈ) ಉತ್ತಮ ಫಲಿತಾಂಶ ನೀಡುವಲ್ಲಿ ವಿಫಲವಾಗಿರುವುದರಿಂದ ಪ್ರಧಾನ ಮಂತ್ರಿಯವರ...

Published On :
ನವದೆಹಲಿ: ಸಂಸದರ ಆದರ್ಶ ಗ್ರಾಮ ಯೋಜನೆ(ಎಸ್ಎಜಿವೈ) ಉತ್ತಮ ಫಲಿತಾಂಶ ನೀಡುವಲ್ಲಿ ವಿಫಲವಾಗಿರುವುದರಿಂದ ಪ್ರಧಾನ ಮಂತ್ರಿಯವರ ಅತ್ಯಂತ ಪ್ರೀತಿಯ ಸಂಸದರ ಗ್ರಾಮ ದತ್ತು ಯೋಜನೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಗ್ರಾಮೀಣಾಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.
ಭಾರತದ ಪ್ರತಿಯೊಬ್ಬ ಸಂಸದರು ಒಂದೊಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿನ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿಪಡಿಸಬೇಕೆಂಬುದು ಪ್ರಧಾನಿಯವರ ಕನಸಾಗಿತ್ತು. ಆದರೆ ಇದಕ್ಕೆ ಸಂಸದರಿಂದ ಸಿಗುತ್ತಿರುವ ನೀರಸ ಪ್ರತಿಕ್ರಿಯೆ ಅಸಮಾಧಾನವನ್ನುಂಟು ಮಾಡಿದ್ದು, ಇದಕ್ಕೆ ಸಚಿವಾಲಯ ಸಂಸದ್ ಆದರ್ಶ ಗ್ರಾಮ ಯೋಜನೆ ಪ್ರಗತಿ ವರದಿ ನೀಡಿ ಅದನ್ನು ಜಾಹೀರುಪಡಿಸಬೇಕೆಂದು ಸೂಚಿಸಿದೆ. ಈ ವರದಿಯನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯ ಪ್ರತಿ ಕ್ಷೇತ್ರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಿದೆ.
ಗ್ರಾಮಗಳಲ್ಲಿ ಕೈಗೊಂಡಿರುವ ಪ್ರಗತಿ ಕೆಲಸಗಳನ್ನು ಬಹಿರಂಗಪಡಿಸಬೇಕಾಗಿರುವುದರಿಂದ ಸಂಸದರು ಹೆಚ್ಚು ಕೆಲಸ ಮಾಡಬಹುದು ಎಂದು ಮೂಲವೊಂದು ತಿಳಿಸಿದೆ.ವರದಿಯಲ್ಲಿ ಸಂಸದರ ಭಾವಚಿತ್ರ, ದತ್ತು ಪಡೆದುಕೊಂಡ ಗ್ರಾಮಗಳ ವಿವರಣೆಯಿರುತ್ತದೆ. ಹಾಗೆಯೇ ದತ್ತು ಸ್ವೀಕರಿಸದ ಸಂಸದರ ಚಿತ್ರದ ಎದುರು ಖಾಲಿ ಸ್ಥಳ ಬಿಡಲಾಗುತ್ತದೆ. ಹೀಗೆ ಖಾಲಿ ಇದ್ದರೆ ಸಂಸದರಿಗೆ ತೊಂದರೆಯಾಗುತ್ತದೆ. ಏಕೆಂದರೆ ಆ ಕ್ಷೇತ್ರದ ಜನರು ತಮ್ಮ ಕ್ಷೇತ್ರದ ಸಂಸದ ಏನೂ ಕೆಲಸ ಮಾಡಿಲ್ಲ ಎಂದು ಭಾವಿಸುತ್ತಾರೆ. ಇದು ಸಂಸದರು ಕೆಲಸ ಮಾಡಲು ಪ್ರೇರೇಪಿಸಬಹುದು ಎಂದು ಗ್ರಾಮೀಣ ಸಚಿವಾಲಯದ ಅಧಿಕಾರಿಯೊಬ್ಬರು ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಜಾಹೀರಾತುಸಂಸದ ಆದರ್ಶ ಗ್ರಾಮ ಯೋಜನೆSansad Adarsh Gram YojanaProgress reportAdvertiseRural development ministryಪ್ರಗತಿ ವರದಿಗ್ರಾಮೀಣ ಅಭಿವೃದ್ಧಿ ಸಚಿವಾಲಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


