ಕಾಪ್ಟರ್ ಹಗರಣ: ಮೇ 4ರಂದು ಸಂಸತ್ತಿನಲ್ಲಿ ಮುಂದೆ ಪರ್ರಿಕರ್ ರಿಂದ ದಾಖಲೆ ಮಂಡನೆ
ವಿವಾದಿತ ಆಗಸ್ಟವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರ ಮತ್ತು ದಾಖಲೆಗಳನ್ನು...

ನವದೆಹಲಿ: ವಿವಾದಿತ ಆಗಸ್ಟವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರ ಮತ್ತು ದಾಖಲೆಗಳನ್ನು ಸಂಸತ್ತಿನಲ್ಲಿ ಮೇ 4ರಂದು ಮಂಡಿಸುವುದಾಗಿ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ತಿಳಿಸಿದ್ದಾರೆ.
ಯಾರಾದರೂ ಈ ಒಪ್ಪಂದದಲ್ಲಿ ಲಂಚ ಪಡೆದಿದ್ದರೆ ನಮಗೆ ಸರಿಯಾದ ಸಾಕ್ಷಿ ಸಿಕ್ಕಿದರೆ ಅವರನ್ನು ಶಿಕ್ಷಿಸಲಾಗುವುದು. ಆದರೆ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪವನ್ನು ಸಾಬೀತುಪಡಿಸಬೇಕು.ಸಂಸತ್ತಿನಲ್ಲಿ ವಿವರ ಮಂಡಿಸುವುದರಿಂದ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಮಾಧ್ಯಮಗಳಿಗೆ ನೀಡುವುದಿಲ್ಲ ಎಂದರು.
2014ರವರೆಗೆ ಕಂಪೆನಿ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ? ಯುಪಿಎ ಸರ್ಕಾರ ಕಂಪೆನಿಯನ್ನು ಕಪ್ಪು ಪಟ್ಟಿಗೆ ಏಕೆ ಸೇರಿಸಲಿಲ್ಲ. ಕಾಂಗ್ರೆಸ್ ನವರೇ ಇದಕ್ಕೆ ಮೊದಲು ಉತ್ತರಿಸಲಿ, ನಮ್ಮ ಸರ್ಕಾರದ ಸಮಯದಲ್ಲಿ ನಾವು ಕಂಪೆನಿಗೆ ನಿಷೇಧ ಹೇರಿದ್ದೆವು ಎಂದು ಪರ್ರಿಕರ್ ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


