ಸಮ-ಬೆಸ ಸಂಖ್ಯೆ ಸಂಚಾರ ನಿಯಮ ಖಾಯಂಗೆ ದೆಹಲಿ ಜನರ ಒಲವು: ಸಮೀಕ್ಷೆ
ದೆಹಲಿಯಲ್ಲಿ ಸಮ- ಬೆಸ ಸಂಖ್ಯೆ ಸಂಚಾರ ನಿಯಮ ಶಾಶ್ವತಗೊಳಿಸುವುದರತ್ತ ದೆಹಲಿಯ ಬಹುತೇಕ ಜನರು ಒಲವು ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.

ನವದೆಹಲಿ: ದೆಹಲಿಯಲ್ಲಿ ಸಮ- ಬೆಸ ಸಂಖ್ಯೆ ಸಂಚಾರ ನಿಯಮ ಶಾಶ್ವತಗೊಳಿಸುವುದರತ್ತ ದೆಹಲಿಯ ಬಹುತೇಕ ಜನರು ಒಲವು ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.
ಪಿಹೆಚ್ ಡಿ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿಯಿಂದ ದೆಹಲಿಯಲ್ಲಿ 1,000 ಕ್ಕೂ ಹೆಚ್ಚು ಜನರನ್ನು ಸಮೀಕ್ಷೆಗೊಳಪಡಿಸಿದ್ದು, ಸಮ ಬೆಸ ಸಂಖ್ಯೆ ಸಂಚಾರ ನಿಯಮದ ಯಶಸ್ಸಿನ ಬಗ್ಗೆ ಪ್ರತಿಕ್ರಿಯೆ ಪಡೆಯಲಾಗಿದೆ. ಪ್ರತಿಕ್ರಿಯೆ ನೀಡಿದವರ ಪೈಕಿ ಬಹುತೇಕ ವ್ಯಕ್ತಿಗಳು, ಸಮ-ಬೆಸ ವಾಹನ ಸಂಚಾರ ನಿಯಮವನ್ನು ಖಾಯಂ ಗೊಳಿಸುವತ್ತ ಒಲವು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಸಮ- ಬೆಸ ಸಂಖ್ಯೆ ಸಂಚಾರ ನಿಮಯದಿಂದಾಗಿ ಸಂಚಾರ ಸಮಯದಲ್ಲಿ ಅನುಕೂಲವಾಗಿದೆ ಎಂದು ಹೇಳಲಾಗುತ್ತಿದೆ ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಅದು ಜಾರಿಗೆ ಬಂದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


