139 ನಂಬರ್ ಗೆ ಡಯಲ್ ಮಾಡಿ, ಖಾತರಿ ರೈಲು ಟಿಕೆಟ್ ರದ್ದು ಮಾಡಿ!
ಪ್ರಯಾಣಿಕರ ಅನುಕೂಲಕ್ಕಾಗಿ ಖಾತರಿಯಾದ ರೈಲು ಟಿಕೆಟ್ ಗಳನ್ನು ರದ್ದು ಮಾಡಲು ರೈಲ್ವೆ ಇಲಾಖೆ ಸುಲಭ ಅವಕಾಶ ಕಲ್ಪಿಸಿದೆ...

ನವದೆಹಲಿ: ಪ್ರಯಾಣಿಕರ ಅನುಕೂಲಕ್ಕಾಗಿ ಖಾತರಿಯಾದ ರೈಲು ಟಿಕೆಟ್ ಗಳನ್ನು ರದ್ದು ಮಾಡಲು ರೈಲ್ವೆ ಇಲಾಖೆ ಸುಲಭ ಅವಕಾಶ ಕಲ್ಪಿಸಿದೆ.
ಇನ್ಮುಂದೆ ಪ್ರಯಾಣಿಕರು 139 ನಂಬರ್ ಗೆ ಡಯಲ್ ಮಾಡುವ ಮೂಲಕ ರೈಲು ಟಿಕೆಟ್ ಗಳನ್ನು ಸುಲಭವಾಗಿ ರದ್ದುಗೊಳಿಸಬಹುದು. ಈ ನಂಬರ್ ಗೆ ಕರೆ ಮಾಡಿ ಖಚಿತಗೊಂಡಿರುವ ಟಿಕೆಟ್ ವಿವರಗಳನ್ನು ರದ್ದು ಪಡಿಸಲು ನೀಡಬೇಕು. ಹೀಗೆ ವಿವರಗಳನ್ನು ನೀಡುವ ವ್ಯಕ್ತಿಗೆ ಒಂದು ಬಾರಿಯ ಪಾಸ್ವರ್ಡ್ (ಒನ್ ಟೈಮ್ ಪಾಸ್ವರ್ಡ್- ಒಟಿಪಿ) ಲಭಿಸುತ್ತದೆ. ಪ್ಯಾಸೆಂಜರ್ ರಿಸರ್ವೆಷನ್ ಕೌಂಟರ್ಗೆ ಹೋಗಿ ಅಲ್ಲಿ ಒಟಿಪಿಯನ್ನು ತಿಳಿಸಿ, ಟಿಕೆಟ್ ಕಾಯ್ದಿರಿಸಲು ಪಾವತಿ ಮಾಡಿದ ಹಣವನ್ನು ಹಿಂದಕ್ಕೆ ಪಡೆಯಬಹುದು.
ಇದಲ್ಲದೆ 139 ನಂಬರನ್ನು ಐಆರ್ಸಿಟಿಸಿ ವೆಬ್ ಸೈಟ್ ಮೂಲಕವೂ ಬಳಸಿಕೊಂಡು ಖಾತರಿಯಾದ ಟಿಕೆಟ್ನ್ನು ರದ್ದು ಪಡಿಸಿಕೊಳ್ಳಬಹುದು. ಈ ಎರಡೂ ಸವಲತ್ತುಗಳು ಶುಕ್ರವಾರದಿಂದಲೇ ಜಾರಿಗೆ ಬಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


