ಉತ್ತರಾಖಂಡ್: ರಾಷ್ಟ್ರಪತಿ ಆಡಳಿತ ಮುಂದುವರಿಕೆ; ಬಹುಮತ ಸಾಬೀತು ಪ್ರಕ್ರಿಯೆಗೂ ತಡೆ
ಉತ್ತಾರಾಖಂಡ್ ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರಪತಿ ಆಡಳಿತ ಮುಂದುವರೆಯಲಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಏ.29 ಕ್ಕೆ ನಿಗದಿಯಾಗಿದ್ದ ಬಹುಮತ ಸಾಬೀತು ಪ್ರಕ್ರಿಯೆಗೆ ತಡೆ...

ನವದೆಹಲಿ: ಉತ್ತಾರಾಖಂಡ್ ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರಪತಿ ಆಡಳಿತ ಮುಂದುವರೆಯಲಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಶುಕ್ರವಾರ (ಏ.29) ಕ್ಕೆ ನಿಗದಿಯಾಗಿದ್ದ ಬಹುಮತ ಸಾಬೀತು ಪ್ರಕ್ರಿಯೆಗೆ ತಡೆ ನೀಡಿದೆ.
ರಾಷ್ಟ್ರಪತಿ ಆಡಳಿತ ಜಾರಿಯ ವಿಷಯದಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ರಾಷ್ಟ್ರಪತಿ ಆಡಳಿತ ಜಾರಿ ಬಗ್ಗೆ ಕೇಂದ್ರ ಸರ್ಕಾರಕ್ಕೆ 7 ಪ್ರಶ್ನೆಗಳನ್ನು ಕೇಳಿದೆ.
" ಬಹುಮತ ಸಾಬೀತುಪಡಿಸುವ ಪ್ರಕ್ರಿಯೆ ರಾಷ್ಟ್ರಪತಿ ಆಡಳಿತ ಘೋಷಿಸುವುದಕ್ಕೆ ಅಧಾರವಾಗುತ್ತಾ?, ವಿಧಾನಸಭಾಧ್ಯಕ್ಷರು ಶಾಸಕರನ್ನು ಅನರ್ಹಗೊಳಿಸುವುದು ಆರ್ಟಿಕಲ್ 356 ರ ಪ್ರಕಾರ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಸಮಂಜಸವಾದ ವಿಷಯವೇ? ಎಂದು ಪ್ರಶ್ನಿಸಿದೆ.
ವಿಧಾನಸಭೆಯಲ್ಲಿ ನಡೆಯುವ ಪ್ರಕ್ರಿಯೆ(ಕಲಾಪ) ವನ್ನು ರಾಷ್ಟ್ರಪತಿಗಳು ಪರಿಗಣಿಸಬಹುದೇ? ಸಂವಿಧಾನದ ಅನುಚ್ಛೇದ 175 (2) ಅಡಿಯಲ್ಲಿ ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಸಂದೇಶ ರವಾನಿಸಬಹುದಿತ್ತೇ? ರಾಜ್ಯಪಾಲ ಹಾಗೂ ವಿಧಾನಸಭಾಧ್ಯಕ್ಷ ಸ್ಥಾನ ಎರಡೂ ಸಾಂವಿಧಾನಿಕ ಹುದ್ದೆಗಳಾಗಿರುವುದರಿಂದ ಮುಖ್ಯಮಂತ್ರಿ ಪರ-ವಿರುದ್ಧ ಇದ್ದ ಮತಗಳನ್ನು ವಿಭಜಿಸುವಂತೆ ರಾಜ್ಯಪಾಲರು ವಿಧಾನಸಭಾಧ್ಯಕ್ಷರನ್ನು ಕೇಳಬಹುದಿತ್ತೇ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ವಿಧಾನಸಭೆಯಲ್ಲಿ ಹಣಕಾಸು ಮಸೂದೆ ಅಂಗೀಕಾರ ವಿಫಲವಾದಲ್ಲಿ ಸರ್ಕಾರ ವಜಾಗೊಳ್ಳಬೇಕೆಂಬುದು ರೂಢಿಯಲ್ಲಿರುವ ನಿಯಮ. ಆದರೆ ಹಣಕಾಸು ಮಸೂದೆ ಅಂಗೀಕಾರಗೊಂಡಿಲ್ಲ ಎಂಬುದನ್ನು ವಿಧಾನಸಭಾಧ್ಯಕ್ಷರು ಹೇಳಿಲ್ಲ, ಹಾಗಾಗಿ ಮಸೂದೆ ಅಂಗೀಕಾರವಾಗಿಲ್ಲ ಎಂಬುದನ್ನು ಯಾರು ಹೇಳಬೇಕು ಹಾಗೂ ರಾಷ್ಟ್ರಪತಿ ಆಡಳಿತ ಜಾರಿಯಾದಾಗ ಒಂದು ಸೂಕ್ತ ಮಸೂದೆಯ ಸ್ಥಿತಿಗತಿಗಳೇನು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದು ಪ್ರಶ್ನೆಗಳಿಗೆ ಕೇಂದ್ರದಿಂದ ಉತ್ತರ ಕೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


