ಜಾರ್ಖಂಡ್‍ನಲ್ಲಿ ನೀರಿನ ಸಮಸ್ಯೆ: ಬಾವಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ
ತಾಪಮಾನ ಏರಿಕೆಯಿಂದಾಗಿ ಜಾರ್ಖಂಡ್ ನಲ್ಲಿ ನೀರಿನ ಮೂಲಗಳು ಬಹುತೇಕ ಬತ್ತಿ ಹೋಗಿದ್ದು, ನೀರಿನ ಸಮಸ್ಯೆ ಶುರುವಾಗಿದೆ. ಇದರಿಂದ ಬೇಸತ್ತ ವ್ಯಕ್ತಿಯೊಬ್ಬ ಬಾವಿಗೆ...

ರಾಂಚಿ: ತಾಪಮಾನ ಏರಿಕೆಯಿಂದಾಗಿ ಜಾರ್ಖಂಡ್ ನಲ್ಲಿ ನೀರಿನ ಮೂಲಗಳು ಬಹುತೇಕ ಬತ್ತಿ ಹೋಗಿದ್ದು, ನೀರಿನ ಸಮಸ್ಯೆ ಶುರುವಾಗಿದೆ. ಇದರಿಂದ ಬೇಸತ್ತ ವ್ಯಕ್ತಿಯೊಬ್ಬ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಂಚಿಯ ಪೂರ್ಣನಗರ ಮೂಲದ ದಿಲೀಪ್ ಯಾದವ್ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದಿಲೀಪ್ ಯಾದವ್ ಬೋರ್ ವೆಲ್ ಕೊರೆಸಲು ಸಾಲ ತೆಗೆದುಕೊಂಡಿದ್ದು, ತಮ್ಮ ಜಮೀನಿನಲ್ಲಿ 700 ಅಡಿಗಳಷ್ಟು ಬೋರ್ ವೆಲ್ ಕೋರೆಸಿದರು. ಆದರೆ ನೀರು ಸಿಗದಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಉಷ್ಣ ಗಾಳಿ ಹಾಗೂ ನೀರಿನ ಸಮಸ್ಯೆಗೆ ಜಾರ್ಖಂಡ್ ಉತ್ತಮ ನಿರ್ದೇಶನವಾಗಿದೆ. ನೀರಿನ ಮೂಲಗಳು ಬಹುತೇಕ ಬತ್ತಿಹೋಗಿದ್ದು, ಇನ್ನು ಕಲುಷಿತ ನೀರನ್ನೇ ಬಳಸಲು ಹಳ್ಳಿಗರು ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


