ದೇಶ

ಮಸೂದ್ ಅಜರ್ ಬಗ್ಗೆ ಭಾರತ-ಪಾಕ್ ಸಮಾಲೋಚನೆ ನಡೆಸಲಿ: ಚೀನಾ

ಜೈಷೆ ಮುಹಮ್ಮದ್ ನಾಯಕ ಮಸೂದ್ ಅಜರ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಭಾರತ ಮತ್ತು ಪಾಕಿಸ್ತಾನ ಮಾತುಕತೆ...

ಮಸೂದ್ ಅಜರ್ ಬಗ್ಗೆ ಭಾರತ-ಪಾಕ್ ಸಮಾಲೋಚನೆ ನಡೆಸಲಿ: ಚೀನಾ
ಜೈಷೆ ಮುಹಮ್ಮದ್ ನಾಯಕ ಮಸೂದ್ ಅಜರ್‌
Published On :
ನವದೆಹಲಿ : ಉಗ್ರ ಸಂಘಟನೆಯಾದ ಜೈಷೆ ಮುಹಮ್ಮದ್ ನಾಯಕ ಮಸೂದ್ ಅಜರ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಭಾರತ ಮತ್ತು ಪಾಕಿಸ್ತಾನ ಮಾತುಕತೆ ನಡೆಸಬೇಕೆಂದು ಚೀನಾ ಹೇಳಿದೆ. ಮಸೂದ್ ಅಜರ್‌ನ್ನು ಯುಎನ್ ಸೆಕ್ಯೂರಿಟಿ ಕೌನ್ಸಿಲ್ ಪಟ್ಟಿಯಲ್ಲಿ ಸೇರಿಸಲು ಭಾರತ ಸಂಯುಕ್ತ ರಾಷ್ಟ್ರಗಳೊಂದಿಗೆ ನಡೆಸುತ್ತಿರುವ ಚರ್ಚೆಗಳ ಹಿನ್ನೆಲೆಯಲ್ಲಿ ಚೀನಾ ಈ ರೀತಿ ಪ್ರತಿಕ್ರಿಯಿಸಿದೆ.
ಮಸೂದ್ ಅಜರ್‌ಗೆ ಸಂಬಂಧಿಸಿದ ಎಲ್ಲ ಮಾತುಕತೆಗಳನ್ನು ನಾವು ಸ್ವಾಗತಿಸುತ್ತೇವೆ. ಇಂಥಾ  ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಭಾರತ ಪಾಕಿಸ್ತಾನದೊಂದಿಗೆ ಆಶಯ ವಿನಿಮಯ ನಡೆಸಬೇಕೆಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನ್‌ಯೆಂಗ್ ಹೇಳಿದ್ದಾರೆ. ಈ ಸಮಸ್ಯೆಗಳು ಆದಷ್ಟು ಬೇಗ ಪರಿಹಾರಗೊಳ್ಳಲಿದೆ ಎಂದು ಆಶಾವಾದ ವ್ಯಕ್ತ ಪಡಿಸಿರುವ ಚೀನಾ ಪಾಕಿಸ್ತಾನ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದಿದೆ. 
ಪಠಾಣ್‌ಕೋಟ್ ಉಗ್ರ ದಾಳಿಯ ಮುಖ್ಯ ರೂವಾರಿ ಎಂದು ಹೇಳಲ್ಪಡುವ ಜೈಷೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ನ್ನು ಯುಎನ್ ಉಗ್ರರ ಪಟ್ಟಿಯಲ್ಲಿ ಸೇರಿಸಲು ಭಾರತ ಇಚ್ಛಿಸಿದೆ. ಉಗ್ರ ಸಂಟನೆಯಾದ ಅಲ್ ಖೈದಾವನ್ನು ಯುಎನ್ ಸೆಕ್ಯೂರಿಟಿ ಕೌನ್ಸಿಲ್ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಈ ವಿಷಯವನ್ನು ಉಲ್ಲೇಖಿಸಿದ ಭಾರತ ಜೈಷೆ ಮುಹಮ್ಮದ್ ಉಗ್ರನನ್ನೂ ಈ ಪಟ್ಟಿಯಲ್ಲಿ ಸೇರಿಸಬೇಕೆಂದು ಒತ್ತಾಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.