ಸಮ-ಬೆಸ ವಿರೋಧಿಸಿ ಕುದುರೆ ಏರಿ ಸಂಸತ್ತಿಗೆ ಬಂದ ಬಿಜೆಪಿ ಸಂಸದ
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ದೆಹಲಿಯಲ್ಲಿ ಜಾರಿಗೆ ತಂದಿರುವ ಸಮ-ಬೆಸ ವಾಹನ ಸಂಚಾರ ಯೋಜನೆಗೆ ವಿರೋಧ ವ್ಯಕ್ತಿಪಡಿಸಿ...

Published On :
ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ದೆಹಲಿಯಲ್ಲಿ ಜಾರಿಗೆ ತಂದಿರುವ ಸಮ-ಬೆಸ ವಾಹನ ಸಂಚಾರ ಯೋಜನೆಗೆ ವಿರೋಧ ವ್ಯಕ್ತಿಪಡಿಸಿ ಪ್ರತಿಭಟನಾರ್ಥವಾಗಿ ಬಿಜೆಪಿ ಸಂಸದ ರಾಮ್ ಪ್ರಸಾದ್ ಶರ್ಮಾ ಅವರು ಬುಧವಾರ ಕುದುರೆಯೇರಿ ಸಂಸತ್ತಿಗೆ ಆಗಮಿಸಿದರು.
ಇಂದು ಸಂಸತ್ತಿಗೆ ಕುದುರೆ ಏರಿ ಬಂದ ರಾಮ್ ಪ್ರಸಾದ್ ಶರ್ಮಾ ಅವರು, ತಮ್ಮ ಕುದುರೆಗೆ ‘ಮಾಲಿನ್ಯ ಮುಕ್ತ ವಾಹನ’ ಎಂಬ ಫಲಕ ಹಾಕಿದ್ದರು. ಅಲ್ಲದೆ ಸಮ-ಬೆಸ ಯೋಜನೆಯಿಂದ ತುರ್ತು ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸೋಮವಾರ ಸಮ-ಬೆಸ ನಿಯಮ ಉಲ್ಲಂಘಿಸಿದ್ದ ಮತ್ತೊಬ್ಬ ಬಿಜೆಪಿ ಸಂಸದ ಪರೇಶ್ ರಾವಲ್ ಅವರಿಗೆ ದಂಡ ವಿಧಿಸಲಾಗಿತ್ತು.
ದೆಹಲಿ ಸರ್ಕಾರ ಸಮ-ಬೆಸ ಯೋಜನೆಯಿಂದ ಸಂಸದರಿಗೆ ತೊಂದರೆಯಾಗದಿರಲಿ ಎಂದು ಹವಾನಿಯಂತ್ರಿತ ಬಸ್ಗಳ ವ್ಯವಸ್ಥೆ ಮಾಡಿದೆ. ಆದರೆ ಮೊದಲ ದಿನವೇ ಸಂಸದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಬಸ್ ಸೇವೆಯನ್ನು ದೆಹಲಿ ಸರ್ಕಾರ ಹಿಂಪಡೆದಿತ್ತು. ಉತ್ತರ ಪ್ರದೇಶದ ಹದೋಯ್ನ ಸಂಸದ ಅನ್ಶುಲ್ ವರ್ಮಾ ಮಾತ್ರ ಬಸ್ನಲ್ಲಿ ಸಂಚರಿಸಿದ್ದರು. ಅನ್ಶುಲ್ ದೆಹಲಿ ಸರ್ಕಾರ ಸೇವೆಯನ್ನು ಬಳಕೆ ಮಾಡಿಕೊಳ್ಳಲು ಬಸ್ನಲ್ಲಿ ಸಂಸತ್ತಿಗೆ ಆಗಮಿಸುತ್ತಿದ್ದೇನೆ ಎಂದು ತಿಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


