ದೇಶ

ನೀರಿಲ್ಲ, ಕೆಲಸವಿಲ್ಲ, ಮದುವೆಯೂ ಇಲ್ಲ: ಜೊಹರಾಪುರಂ ಹಳ್ಳಿ ಯುವಕರ ಸಂಕಷ್ಟ

ದೇಶದಲ್ಲೆಡೆ ಭೀಕರ ಬರಗಾಲ ಸಂಭವಿಸಿ ಜನರು ನೀರಿಗಾಗಿ, ಕೆಲಸಕ್ಕಾಗಿ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಜೊಹರಾಪುರಂ ಹಳ್ಳಿಯ ಯುವಕರಿಗೆ ಬರದ ಪರಿಣಾಮ ಮದುವೆಯಾಗಲು...

ನೀರಿಲ್ಲ, ಕೆಲಸವಿಲ್ಲ, ಮದುವೆಯೂ ಇಲ್ಲ: ಜೊಹರಾಪುರಂ ಹಳ್ಳಿ ಯುವಕರ ಸಂಕಷ್ಟ
ಸಾಂದರ್ಭಿಕ ಚಿತ್ರ
Published On :

ಕರ್ನೂಲ್: ದೇಶದಲ್ಲೆಡೆ ಭೀಕರ ಬರಗಾಲ ಸಂಭವಿಸಿ ಜನರು ನೀರಿಗಾಗಿ, ಕೆಲಸಕ್ಕಾಗಿ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಜೊಹರಾಪುರಂ ಹಳ್ಳಿಯ ಯುವಕರಿಗೆ ಬರದ ಪರಿಣಾಮ ಮದುವೆಯಾಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲವಂತೆ.

ಜೊಹರಾಪುರಂ ಗ್ರಾಮದಲ್ಲಿ ಭೀಕರ ಬರಗಾಲ ಸಂಭವಿಸಿದ್ದು, ನೀರಿಲ್ಲದೆ ಕಾರಣ ಇಲ್ಲಿನ ಜನತೆಗೆ ಮಾಡಲು ಕೆಲಸವಿಲ್ಲದಂತಾಗಿದೆ. ಹೀಗಾಗಿ ಕೆಲಸವಿಲ್ಲದ ಯುವಕರಿಗೆ ಹೆಣ್ಣು ಮಕ್ಕಳನ್ನು ನೀಡಲು ಪೋಷಕರು ಹಿಂದೂ ಮುಂದು ನೋಡುತ್ತಿದ್ದಾರೆಂದು ಗ್ರಾಮದ ಯುವಕರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಬಿಎಡ್ ಪದವೀಧರ ಡಿ ಅಹ್ಮದ್, ಬರಗಾಲದಿಂದಾಗಿ ಗ್ರಾಮದ ಯುವಕರು ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಇನ್ನು ಕೆಲವು ಯುವಕರಿಗೆ ಮದುವೆಯಾಗರೂ ಹೆಣ್ಣು ಮಕ್ಕಳು ಸಿಗುತ್ತಿಲ್ಲ. ರೆ ಪ್ರದೇಶದಲ್ಲಿ ಕೆಲಸ ಪಡೆದುಕೊಂಡ ಯುವಕರಿಗೆ ಮಾತ್ರ ಹೆಣ್ಣುಮಕ್ಕಳನ್ನು ಕೊಟ್ಟು ಮದುವೆ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಬರಗಾಲವಿದ್ದು, ಕುಡಿಯಲು ನೀರು ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಮತ್ತೊಬ್ಬ ಯುವತ ಆರ್ ಸುರೇಶ್ ಮಾತನಾಡಿ, ನನ್ನ ಅಣ್ಣನ ಮದುವೆ ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಿ ಹೋಗಿದೆ. ಕಳೆದ 2 ವರ್ಷದಿಂದಲೂ ಹೆಣ್ಣಿಗಾಗಿ ಹುಡುಕಾಡುತ್ತಿದ್ದೇವೆ. ಮದುವೆ ಮಾತುಕತೆ ಮಾಡಲು ಬರುವವರು ಹಳ್ಳಿಯ ಪರಿಸ್ಥಿತಿ ನೋಡಿ ಮತ್ತೆ ಹಿಂದೆ ಸರಿಯುತ್ತಿದ್ದಾರೆಂದು ಹೇಳಿದ್ದಾರೆ. \

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.