ಸಂಕಟ್ ಮೋಚನ್ ಕಚೇರಿಗೆ ವಿರೋಧ: ಗುಲಾಂ ಅಲಿ ಭಾವ ಚಿತ್ರ ಸುಟ್ಟು ಪ್ರತಿಭಟನೆ
ಪಾಕಿಸ್ತಾನಿ ಘಜಲ್ ಗಾಯಕ ಗುಲಾಂ ಅಲಿ ಅವರು ವಾರಣಾಸಿಯ ಸಂಕಟ್ ಮೋಚನ್ ಹನುಮಾನ್ ದೇಗುಲದಲ್ಲಿ ನಡೆಸಿಕೊಡಲಿರುವ ಸಂಗೀತ ಕಚೇರಿಗೆ ಶಿವ ಸೈನಿಕ್ ಸಂಘಟನೆ ವಿರೋಧ ವ್ಯಕ್ತಪಡಿಸಿದ್ದು...

ವಾರಣಾಸಿ: ಪಾಕಿಸ್ತಾನಿ ಘಜಲ್ ಗಾಯಕ ಗುಲಾಂ ಅಲಿ ಅವರು ವಾರಣಾಸಿಯ ಸಂಕಟ್ ಮೋಚನ್ ಹನುಮಾನ್ ದೇಗುಲದಲ್ಲಿ ನಡೆಸಿಕೊಡಲಿರುವ ಸಂಗೀತ ಕಚೇರಿಗೆ ಶಿವ ಸೈನಿಕ್ ಸಂಘಟನೆ ವಿರೋಧ ವ್ಯಕ್ತಪಡಿಸಿದ್ದು, ಗುಲಾಂ ಅಲಿ ಅವರ ಭಾವಚಿತ್ರವನ್ನು ಸುಟ್ಟು ಸೋಮವಾರ ಪ್ರತಿಭಟನೆ ನಡೆಸುತ್ತಿದೆ.
ಗುಲಾಂ ಅಲಿ ಅವರು ನಾಳೆ ಸಂಗೀತ ಕಚೇರಿಯನ್ನು ನಡೆಸಿಕೊಡಲಿದ್ದು, ಇಂದು ರಾತ್ರಿ 8 ಗಂಟೆಗೆ ವಾರಣಾಸಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವ ಸೈನಿಕ್ ಸಂಘಟನೆ ವಿರೋಧ ವ್ಯಕ್ತಪಡಿಸಿದ್ದು, ಹಲವೆಡೆ ಪ್ರತಿಭಟನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಸಂಗೀತ ಕಚೇರಿ ನಡೆಸಿಕೊಡುವಂತೆ ಸ್ವತಃ ದೇಗುಲದ ಆಡಳಿತ ಮಂಡಳಿಯವರೇ ಗುಲಾಂ ಅಲಿ ಅವರನ್ನು ಸಂಪರ್ಕಿಸಿದ್ದು, ಸಂಗೀತ ಕಚೇರಿ ನಡೆಸಿಕೊಂಡುವಂತೆ ಮನವಿ ಮಾಡಿಕೊಂಡಿದ್ದರು. ಇದರಂತೆ ಕಚೇರಿ ನಡೆಸಿಕೊಡಲು ಗುಲಾಂ ನಬಿ ಅವರು ಒಪ್ಪಿಕೊಂಡಿದ್ದರು. ಆದರೆ, ಇದಕ್ಕೆ ಹಲವು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


