ಬುಡಕಟ್ಟು ಜನಾಂಗದ ಹೆಣ್ಣುಮಕ್ಕಳ ಕಳ್ಳ ಸಾಗಣೆ: ಐವರ ಬಂಧನ
ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಬುಡಕಟ್ಟು ಜನಾಂಗದ ಹುಡುಗಿಯರನ್ನು ಸಾಗಣೆ ಮಾಡುತ್ತಿದ್ದ ಐವರು ಆರೋಪಿಗಳನ್ನು...

Published On :
ಬೆರ್ಹಾಂಪುರ್: ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಬುಡಕಟ್ಟು ಜನಾಂಗದ ಹುಡುಗಿಯರನ್ನು ಸಾಗಣೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಒಡಿಶಾದ ಕಂಧಮಾಲ್ ಜಿಲ್ಲೆಯಿಂದ ತಮಿಳುನಾಡಿಗೆ ಹುಡಿಗಿಯರನ್ನು ಸಾಗಿಸುತ್ತಿದ್ದ ರಾಂಜನ್ ಬಾಗ್, ಕೆಸಬ್ ಸಾಹು, ಭುಜರಾಜ್ ಮಜ್ಹಿ, ಸುದಾಮ್ ನಾಗ್ ಮತ್ತು ಮೈನಿಕೇತನ್ ಬೆರುಕ್ ಅವರನ್ನು ಬಂಧಿಸಲಾಗಿದೆ.
ನೂಲುವ ಗಿರಣಿಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದಲ್ಲದೇ, ತಮಿಳುನಾಡಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡುದ್ದೇವೆ ಎಂದು ಸುಳ್ಳು ಹೇಳಿ ಹುಡುಗಿಯರನ್ನು ಕರೆದುಕೊಂಡು ಹೋಗುತ್ತಿದ್ದರು. ಇತ್ತೀಚೆಗೆ ಹಳ್ಳಿಯ ಹೆಣ್ಣು ಮಕ್ಕಳನ್ನು ಸಾಗಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಎಚ್ಚರಿಕೆ ವಹಿಸಲಾಗಿತ್ತು.
ಈ ವೇಳೆ ತಮಿಳುನಾಡಿಗೆ ತೆರಳು ಬಸ್ ಸ್ಟಾಂಡ್ ನಲ್ಲಿ ಹುಡುಗಿಯರು ಇದ್ದರು. ಅಲ್ಲಿಗೆ ತೆರಳಿ ವಿಚಾರಿಸಿದಾಗ ಸತ್ಯ ಬಯಲಾಗಿದೆ. ಹುಡುಗಿಯರನ್ನು ರಕ್ಷಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ತಿಂಗಳು ವಿವಿಧ ರಾಜ್ಯಗಳಿಂದ ಸುಮಾರು 34 ಅಪ್ರಾಪ್ತೆಯರು, 26 ಯುವತಿಯರನ್ನು ವಿವಿಧ ರೈಲ್ವೆ ನಿಲ್ದಾಣಗಳಿಂದ ರಕ್ಷಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


