ಕೇಂದ್ರ ಸರ್ಕಾರದ ಕೆಲವು ಯೋಜನೆಗಳು ವಿಶಿಷ್ಟ ಹಾಗೂ ವಿಭಿನ್ನ: ರಾಜ್ಯವರ್ಧನ್ ಸಿಂಗ್ ರಾಥೋಡ್
ಹೊಸ ಕಲ್ಪನೆಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ಸಿಂಗ್...

ನವದೆಹಲಿ: ಹೊಸ ಕಲ್ಪನೆಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ನರೇಂದ್ರ ಮೋದಿ ಸರ್ಕಾರದ ಯೋಜನೆಗಳಾದ ಜನಧನ ಯೋಜನೆ, ಬೇವು ಲೇಪಿತ ಯೂರಿಯಾ, ಶ್ರೀಮಂತರು ಎಲ್ ಪಿಜಿ ಸಬ್ಸಿಡಿ ಸಿಲಿಂಡರ್ ನ್ನು ಬಿಟ್ಟುಬಿಡುವುದು ಮೊದಲಾದವು ಹೊಸ ದೃಷ್ಟಿಕೋನದ, ವಿಭಿನ್ನ ಆಲೋಚನೆಯಿಂದ ಬಂದ ಯೋಜನೆಗಳು ಎಂದು ಹೇಳಿದ್ದಾರೆ.
ಜನಧನ ಯೋಜನೆ ಬಗ್ಗೆ ಹೇಳಿದ ಅವರು, ದೇಶದ ಸಂಪನ್ಮೂಲ ಮಾತ್ರವಲ್ಲದೆ, ಜನರು ಸ್ವಪ್ರೇರಣೆಯಿಂದ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯಲು ಸಹಾಯ ಮಾಡಿದೆ. ಇನ್ನು ರಾಸಾಯನಿಕ ಗೊಬ್ಬರವಾದ ಯೂರಿಯಾವನ್ನು ಬೆಳೆಗಳಿಗೆ ಹಾಕುವುದನ್ನು ತಪ್ಪಿಸಲು ಬೇವಿನ ಲೇಪಿತ ಯೂರಿಯಾವನ್ನು ಹಾಕಿ ನಿಧಾನವಾಗಿ ಸಾವಯವ ಕೃಷಿಯತ್ತ ಜನರನ್ನು ಆಕರ್ಷಿಸುವುದಾಗಿದೆ ಎಂದರು.
ಶ್ರೀಮಂತರು ತಮಗೆ ಸಿಗುತ್ತಿರುವ ಸಬ್ಸಿಡಿ ಸಿಲಿಂಡರನ್ನು ಬಿಟ್ಟುಬಿಟ್ಟರೆ ದೇಶದ ಬಡ ಮತ್ತು ಮಧ್ಯಮ ವರ್ಗದವರಿಗೆ ಸಬ್ಸಿಡಿಯಲ್ಲಿ ಸಿಲಿಂಡರ್ ದೊರೆಯುತ್ತದೆ. ಆರಂಭದಲ್ಲಿ ಸಬ್ಸಿಡಿ ಸಿಲಿಂಡರನ್ನು ಯಾರೂ ಕೂಡ ಬಿಟ್ಟುಬಿಡಲಿಕ್ಕಿಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಇಂದು ಕೋಟಿಗೆ ಹತ್ತಿರ ಜನರು ಸಬ್ಸಿಡಿ ಸಿಲಿಂಡರನ್ನು ಬಿಟ್ಟುಬಿಟ್ಟಿದ್ದಾರೆ ಎಂದು ಸಚಿವ ರಾಥೋರ್ ಬಿಎಂಎಲ್ ಮುಂಜಲ್ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


