ದೇಶ

ಅಪ್ರಾಪ್ತೆ ಮೇಲೆ 113 ಜನರಿಂದ 2 ವರ್ಷಗಳಿಂದ ನಿರಂತರ ಅತ್ಯಾಚಾರ!

6 ವರ್ಷದ ಬಾಲಕಿ ಮೇಲೆ ಪೊಲೀಸರು ಸೇರಿದಂತೆ ಸುಮಾರು 113 ಮಂದಿ ಕಳೆದ 2 ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.....

ಅಪ್ರಾಪ್ತೆ ಮೇಲೆ 113 ಜನರಿಂದ 2 ವರ್ಷಗಳಿಂದ ನಿರಂತರ ಅತ್ಯಾಚಾರ!
ಸಾಂದರ್ಭಿಕ ಚಿತ್ರ
Published On :

ಪುಣೆ: 16 ವರ್ಷದ ಬಾಲಕಿ ಮೇಲೆ ಪೊಲೀಸರು ಸೇರಿದಂತೆ ಸುಮಾರು 113 ಮಂದಿ ಕಳೆದ 2 ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಉದ್ಯೋಗ ಕೊಡಿಸುವುದಾಗಿ ನಂಬಿಸಿ ಪಶ್ಚಿಮ ಬಂಗಾಳದ 16 ವರ್ಷದ ಬಾಲಕಿಯೊಬ್ಬಳನ್ನು ಚಿತ್ರಹಿಂಸೆ ನೀಡಿ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದು, ಅವಳ ಮೇಲೆ ಪೊಲೀಸರೂ ಸೇರಿದಂತೆ 113 ಮಂದಿ ಅತ್ಯಾಚಾರ ನಡೆಸಿದ್ದಾರೆ.

ಕಳೆದ ತಿಂಗಳು  ಬಾಲಕಿ ಅಲ್ಲಿಂದ ಪಾರಾಗಿ ದೆಹಲಿಗೆ ಬಂದು ಶನಿವಾರ ಪೊಲೀಸರಿಗೆ ದೂರು ನೀಡಿದ್ದಾಳೆ.ಪ್ರಕರಣ ಸಂಬಂಧ ವಿನುಂತಲ್ ಠಾಣೆ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.

ಮುಂಬೈನಲ್ಲಿ ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾಗಿದ್ದ ದೆಹಲಿಯ ಮಾಡೆಲ್ ಒಬ್ಬಳು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ದೆಹಲಿಗೆ ಬರುವಾಗ ಆಕಸ್ಮಿಕವಾಗಿ ಜತೆಯಲ್ಲಿ ಆ ಬಾಲಕಿಯನ್ನು ಕರೆತಂದಿದ್ದಳು. ಆ ಬಾಲಕಿಯ ಕಥೆ ಕೇಳಿದಾಗ ಈ ಎಲ್ಲ ಅಂಶಗಳೂ ಬೆಳಕಿಗೆ ಬಂದಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದನ್‌ನಗರ್ ಠಾಣೆ ಪೊಲೀಸರೂ, ರೋಹಿತ್ ಭಂಡಾರಿ (35), ಹರೀಶ್ ಶಹಾ (25), ನೇಪಾಳ ಮೂಲದ ಸ್ವೀಕೃತಿ ಖರೇಲ್ (26) ಹಾಗೂ ತಪೇಂದ್ರ ಸಾಹಿ (23) ಎಂಬುವವರನ್ನು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಭಂಡಾರಿ ಎಂಬ ವ್ಯಕ್ತಿ ಬಾಲಕಿಯನ್ನು ನೋಡಿದ್ದ. ನಂತರ 2014ರ ಜನವರಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಬಾಲಕಿ ಕರೆತಂದಿದ್ದ. ತಾನು ಅತ್ಯಾಚಾರ ನಡೆಸಿದ ನಂತರ ಅವಳನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.