ಹಿಂದುಗಳ ನಾಶಕ್ಕೆ ಭಾರತದಲ್ಲಿ ಐಸಿಸ್ ಗೆರಿಲ್ಲಾ ದಾಳಿ!
ಭಾರತದಲ್ಲಿರುವ ಹಿಂದೂಗಳನ್ನು ಸರ್ವನಾಶ ಮಾಡುವ ಮೂಲಕ ಹಿಂದೂಸ್ತಾನದಲ್ಲಿ ಷರಿಯಾ ಕಾನೂನು ಜಾರಿಗೊಳಿಸುವ ವಿಶ್ವದ ಅತ್ಯಂತ ಶ್ರೀಮಂತ ಉಗ್ರಗಾಮಿ ಸಂಘಟನೆ ಇಸಿಸ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ...

ನವದೆಹಲಿ: ಭಾರತದಲ್ಲಿರುವ ಹಿಂದೂಗಳನ್ನು ಸರ್ವನಾಶ ಮಾಡುವ ಮೂಲಕ ಹಿಂದೂಸ್ತಾನದಲ್ಲಿ ಷರಿಯಾ ಕಾನೂನು ಜಾರಿಗೊಳಿಸುವ ವಿಶ್ವದ ಅತ್ಯಂತ ಶ್ರೀಮಂತ ಉಗ್ರಗಾಮಿ ಸಂಘಟನೆ ಇಸಿಸ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ನೆರವಿನೊಂದಿಗೆ ಭಾರತದ ಮೇಲೆ ಗೆರಿಲ್ಲಾ ದಾಳಿ ನಡೆಸಿ ಹಿಂದುಗಳ ಸರ್ವನಾಶ ಮಾಡುವುದಾಗಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆ ಎಚ್ಚರಿಕೆ ನೀಡಿದೆ. ತನ್ನ ಮುಖವಾಣಿ ಆನ್ಲೈನ್ ಮ್ಯಾಗಜೀನ್ ‘ದಬಿಕ್’ಗೆ ಸಂದರ್ಶನ ನೀಡಿರುವ ಐಸಿಸ್ ನ ಬಾಂಗ್ಲಾದೇಶ ಘಟಕದ ಮುಖ್ಯಸ್ಥ ಶೇಖ್ ಅಬು ಇಬ್ರಾಹಿಂ ಅಲ್ ಹನೀಫ್ ಈ ಬಗ್ಗೆ ಹೇಳಿಕೊಂಡಿದ್ದು, ಭಾರತದಲ್ಲಿ ಷರಿಯಾ ಕಾನೂನು ಜಾರಿಗೊಳಿಸವುದೇ ನಮ್ಮ ಗುರಿ ಎಂದು ಹೇಳಿಕೊಂಡಿದ್ದಾನೆ. ಇದಕ್ಕಾಗಿ ಭಾರತದ ವಿರುದ್ಧ ಗೆರಿಲ್ಲಾ ಯುದ್ಧ ಮಾಡಲು ನಾವು ಸಜ್ಜಾಗಿದ್ದು, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಇತರೆ ಉಗ್ರಗಾಮಿ ಸಂಘಟನೆಗಳ ನೆರವು ಕೂಡ ಪಡೆಯುತ್ತೇವೆ ಎಂದು ಹೇಳಿದ್ದಾನೆ.
ಭಾರತದಲ್ಲಿರುವ ಧರ್ಮಗಳ ನಡುವೆ ಬಿರುಕು ಮೂಡಿಸಿ ಅಲ್ಲ ಗಲಭೆ ಎಬ್ಬಿಸಿದರೆ ನಮ್ಮ ಗುರಿಯನ್ನು ನಾವು ಸುಲಭವಾಗಿ ತಲುಪಬಹುದು ಎಂದು ಹೇಳಿರುವ ಉಗ್ರ ಹನೀಫ್, ತನ್ನ ಉಗ್ರರಿಗೆ ಭಾರತದಲ್ಲಿ ಸಂಘಟನೆಯನ್ನು ಪಸರಿಸಲು ಸೂಚನೆ ನೀಡಿದ್ದಾನೆ. ಅಗತ್ಯ ಬಿದ್ದರೆ ಇದಕ್ಕಾಗಿ ಬಾಂಗ್ಲಾದೇಶದ ಉಗ್ರರನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಿದ್ದಾನೆ.
ಬಾಂಗ್ಲಾದೇಶವನ್ನು ‘ಬೆಂಗಾಲ್’ ಎಂದು ಕರೆದಿರುವ ಈತ, ಭಾರತದ ಮೇಲೆ ದಾಳಿ ನಡೆಸಲು ಸೂಕ್ತ ಕಾರ್ಯತಂತ್ರ ಅಗತ್ಯವಿದೆ ಎಂದಿದ್ದಾನೆ. ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆ ವಿಲಾಯತ್ ಖುರಾಸನ್ ಮತ್ತು ಸ್ಥಳೀಯರ ನೆರವಿನೊಂದಿಗೆ ಭಾರತದ ಮೇಲೆ ದಾಳಿ ನಡೆಸಿ ಎಲ್ಲ ಹಿಂದುಗಳನ್ನು ನಾಶಗೊಳಿಸಿ, ಷರಿಯಾ ಕಾನೂನನ್ನು ಜಾರಿಗೆ ತರಲಿದ್ದೇವೆ. ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ತರಬೇತಿ ಪಡೆದಿರುವ ಉಗ್ರರು ಗೆರಿಲ್ಲಾ ದಾಳಿ ನಡೆಸಲಿದ್ದಾರೆ ಎಂದು ಹನೀಫ್ ಹೇಳಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


