ದೇಶ

ವೈದ್ಯರ ಮೇಲೆ ಹಲ್ಲೆ : ಬಿಜೆಪಿ ಸಂಸದನಿಗೆ ಮೂರು ವರ್ಷ ಜೈಲು ಶಿಕ್ಷೆ

ಡಾಕ್ಟರ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದರೊಬ್ಬರಿಗೆ ಗುಜರಾತ್‌ನ ಅಮ್ರಿಲಿ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ...

ವೈದ್ಯರ ಮೇಲೆ ಹಲ್ಲೆ : ಬಿಜೆಪಿ ಸಂಸದನಿಗೆ ಮೂರು ವರ್ಷ ಜೈಲು ಶಿಕ್ಷೆ
ನರನ್‌ಬಾಯ್ ಕಚ್ಚಾಡಿಯಾ
Published On :

ನವದೆಹಲಿ: ಡಾಕ್ಟರ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದರೊಬ್ಬರಿಗೆ ಗುಜರಾತ್‌ನ ಅಮ್ರಿಲಿ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬಿಜೆಪಿಯ ನರನ್‌ಬಾಯ್ ಕಚ್ಚಾಡಿಯಾ ಶಿಕ್ಷೆಗೆ ಗುರಿಯಾದ ಸಂಸದ. ಅಮ್ರಿಲಿ ಲೋಕಸಭಾ ಸದಸ್ಯ ನರನ್‌ಬಾಯ್ 2013ರ ಜನವರಿ 1ರಂದು ಇತರ ನಾಲ್ವರ ಜೊತೆಗೂಡಿ ಅಮ್ರಿಲಿ ಸಿವಿಲ್ ಆಸ್ಪತ್ರೆಯ ಸರ್ಕಾರಿ ವೈದ್ಯ ಬೀಮ್‌ಜಿಭಾಯ್ ದಬಿ ಅವರ ಮೇಲೆ ಹಲ್ಲೆ ಮಾಡಿದ್ದರು. ವೈದ್ಯ ಭೀಮ್‌ಜಿ ಅವರು ಬಿಜೆಪಿ ಕಾರ್ಯಕರ್ತರ ಬಂಧುವೊಬ್ಬರಿಗೆ ಚಿಕಿತ್ಸೆಗೆ ನೀಡಲಿಲ್ಲ ಎಂಬ ಕಾರಣವೊಡ್ಡಿ ನರನ್‌ಬಾಯ್ ಮತ್ತಿತರರು ಅವರ ಮೇಲೆ ಹಲ್ಲೆ ಮಾಡಿದ್ದರು.

ವೈದ್ಯ ಭೀಮ್‌ಬಾಯ್ ಬೇರೊಬ್ಬ ರೋಗಿಯ ಚಿಕಿತ್ಸೆಯಲ್ಲಿ ತೊಡಗಿದ್ದರು, ನರನ್‌ಬಾಯ್ ಕಡೆಯ ರೋಗಿ ಚಿಕಿತ್ಸೆಗೆ ಸ್ವಲ್ಪ ಹೊತ್ತು ಕಾಯುವಂತೆ ಸೂಚಿಸಿದ್ದರು . ಇದರಿಂದ ಕುಪಿತಗೊಂಡ ರೋಗಿಯ ಕಡೆಯವರು ನರನ್‌ಬಾಯ್ ಅವರಿಗೆ ದೂರಿತ್ತಿದ್ದರು. ಅಂತೆಯೇ ನರನ್ ಬಾಯ್ ಆಸ್ಪತ್ರೆಗೆ ಬಂದು ವೈದ್ಯ ಭೀಮ್ ಬಾಯ್ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ.
 
ಸುದೀರ್ಘ ವಿಚಾರಣೆ ಬಳಿಕ ಅಮ್ರಿಲಿ ನ್ಯಾಯಾಲಯ ಬಿಜೆಪಿ ಸಂಸದ ನರನ್‌ಬಾಯ್ ಮತ್ತಿತರ ನಾಲ್ವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 35 ಸಾವಿರ ರೂ ದಂಡ ವಿಧಿಸಿದೆ. ಆದರೆ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ ಒಂದು ತಿಂಗಳ ಕಾಲಾವಕಾಶ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.