ಗುರುಗಾಂವ್, ಮೇವಾತ್ ಮರುನಾಮಕರಣಕ್ಕೆ ಸಿಪಿಐ(ಎಂ) ವಿರೋಧ
ಹರ್ಯಾಣದ ಗುರುಗಾಂವ್, ಮೇವಾತ್ ನಗರಗಳಿಗೆ ಮರುನಾಮಕರಣ ಮಾಡುವುದನ್ನು ಸಿಪಿಐ(ಎಂ) ವಿರೋಧಿಸಿದೆ.
.jpg?w=1200&q=68&auto=format,compress)
ರೋಹ್ಟಕ್: ಹರ್ಯಾಣದ ಗುರುಗಾಂವ್, ಮೇವಾತ್ ನಗರಗಳಿಗೆ ಮರುನಾಮಕರಣ ಮಾಡುವುದನ್ನು ಸಿಪಿಐ(ಎಂ) ವಿರೋಧಿಸಿದೆ.
ಮರುನಾಮಕರಣವನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದಿರುವ ಸಿಪಿಐ(ಎಂ) ನ ಕಾರ್ಯದರ್ಶಿ ಸುರೇಂದರ್ ಸಿಂಗ್, ಈ ಹಿಂದೆಯೂ ಇಂತಹ ಪ್ರಯತ್ನಗಳು ನಡೆದಿತ್ತು, ಆದರೆ ತಾರ್ಕಿಕವಾಗಿ ಸಮರ್ಥನೆಗಳ ಕಾರಣದಿಂದ ಮರುನಾಮಕರಣ ಯತ್ನವನ್ನು ಕೈಬಿಡಲಾಗಿತ್ತು ಎಂದು ಹೇಳಿದ್ದಾರೆ.
"ದ್ರೋಣಾಚಾರ್ಯರು ದಲಿತ ವಿದ್ಯಾರ್ಥಿಗೆ ಬೋಧನೆ ಮಾಡುವುದಕ್ಕೆ ನಿರಾಕರಿಸಿದ್ದರು. ಕೈಬೆರಳನ್ನು ತುಂಡರಿಸಿಕೊಳ್ಳುವಂತೆ ಏಕಲವ್ಯನಿಗೆ ಹೇಳಿದ್ದರು, ಈಗ ದ್ರೋಣಾಚಾರ್ಯರ ಕಾಲದಿಂದಲೂ ಗುರುಗಾಂವ್ ಶಿಕ್ಷಣದ ವಿಷಯಕ್ಕೆ ಪ್ರಸಿದ್ಧಿ ಪಡೆದಿತ್ತು ಎಂಬ ಕಾರಣಕ್ಕಾಗಿ ಗುರುಗಾಂವ್ ಗೆ ಗುರುಗ್ರಾಮ ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂದು ಸುರೇಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏ.14 ರಂದು ಅಂಬೇಡ್ಕರ್ ರ 125 ನೇ ಜನ್ಮದಿನಾಚರಣೆಗೂ ಮುನ್ನಾ ದಿನ ಹರ್ಯಾಣದ ಸರ್ಕಾರ ಅಸಂಗತ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸಮಾಜವಾದ, ಪ್ರಜಾಪ್ರಭುತ್ವದ ಪರ ನಿಲುವು ಹೊಂದಿರುವವರು ಹರ್ಯಾಣ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಗುರುಗಾಂವ್, ಮೇವಾತ್ ನಗರಗಳಿಗೆ ಮರುನಾಮಕರಣ ಮಾಡುವುದನ್ನು ತಡೆಗಟ್ಟಲು ಒತ್ತಾಯಿಸಬೇಕು ಎಂದು ಸಿಂಗ್ ಕರೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


.jpg?w=64&q=30&auto=format,compress)