ಕೊಲ್ಲಂ ಪಟಾಕಿ ದುರಂತಕ್ಕೆ ಕಾರಣವಾಗಿದ್ದು ಪೊಟಾಷಿಯಂ ಕ್ಲೋರೇಟ್ ?
ಪಟಾಕಿಯಲ್ಲಿ ಹೆಚ್ಚಿನ ಬೆಳಕು ಮತ್ತು ಸದ್ದು ಹೊರಡಿಸುವುದಕ್ಕಾಗಿ ನಿಷೇಧಿತ ಸಿಡಿ 'ಮದ್ದು' ಪೊಟಾಷಿಯಂ ಕ್ಲೋರೇಟ್‌ನ್ನು ಪುಟ್ಟಿಂಗಲ್ ದೇವಿ....

Published On :
ಕೊಲ್ಲಂ: ಪಟಾಕಿಯಲ್ಲಿ ಹೆಚ್ಚಿನ ಬೆಳಕು ಮತ್ತು ಸದ್ದು ಹೊರಡಿಸುವುದಕ್ಕಾಗಿ ನಿಷೇಧಿತ ಸಿಡಿ 'ಮದ್ದು' ಪೊಟಾಷಿಯಂ ಕ್ಲೋರೇಟ್‌ನ್ನು ಪುಟ್ಟಿಂಗಲ್ ದೇವಿ ದೇವಾಲಯದ ಜಾತ್ರಾ ಉತ್ಸವದಲ್ಲಿ ಬಳಸಲಾಗಿತ್ತು ಎಂದು ತಜ್ಞರು ಹೇಳಿದ್ದಾರೆ.
ಪಟಾಕಿ ತಯಾರಿಸುವವರು ಪೊಟಾಷಿಯಂ ಕ್ಲೋರೇಟ್ ನ್ನು 'ವೆಳ್ಳ' ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಪಟಾಕಿಗಳಲ್ಲಿ ಪೊಟಾಷಿಯಂ ನೈಟ್ರೇಟ್‌ನ್ನು ಬಳಸಲಾಗುತ್ತದೆ. ಆದರೆ ಪಟಾಕಿಯಲ್ಲಿ ಹೆಚ್ಚಿನ ಸದ್ದು ಹೊರಡಿಸಲು ಪೊಟಾಷಿಯಂ ಕ್ಲೋರೇಟ್ ಬಳಸಲ್ಪಡುತ್ತದೆ. ಪಟಾಕಿ ತಯಾರಕರಿಗೆ ಇದನ್ನು ಖರೀದಿಸುವ ಅಥವಾ ಮಾರುವ ಅನುಮತಿ ಇಲ್ಲ. ಆದಾಗ್ಯೂ, ಬೆಂಕಿಪೊಟ್ಟಣ ನಿರ್ಮಾಣ ಕಾರ್ಖಾನೆಗಳಲ್ಲಿ ಮಾತ್ರ ಪೊಟಾಷಿಯಂ ಕ್ಲೋರೇಟ್‌ನ್ನು ಬಳಸಲಾಗುತ್ತದೆ.
ಬೆಂಕಿಯ ಕಿಡಿಯೊಂದು ಪಟಾಕಿ ದಾಸ್ತಾನು ಕೇಂದ್ರದ ಮೇಲೆ ಬಿದ್ದೊಡನೆ ಅಲ್ಲಿರುವ ಪಟಾಕಿಗಳೆಲ್ಲ ಒಟ್ಟಿಗೆ ಸ್ಫೋಟಗೊಂಡಿದ್ದು, ಆ ಸ್ಫೋಟದ ತೀವ್ರತೆಯನ್ನು ಲೆಕ್ಕ ಹಾಕಿ ಇಲ್ಲಿ ಪೊಟಾಷಿಯಂ ಕ್ಲೋರೇಟ್‌ನ್ನೇ ಬಳಸಲಾಗಿತ್ತು ಎಂದು ತಜ್ಞರ ಅಭಿಪ್ರಾಯವಾಗಿದೆ. ಬೆಂಕಿಯ ಕಿಡಿ ಮಾತ್ರವಲ್ಲ ಅತೀ ಪ್ರಬಲವಾದ ಬಿಸಿಲಿನ ಬೇಗೆ ತಾಕಿದರೂ ಪೊಟಾಷಿಯಂ ಕ್ಲೋರೇಟ್ ಬೆಂಕಿ ಸೃಷ್ಟಿಸುವ ಸಾಮರ್ಥ್ಯವುಳ್ಳದ್ದಾಗಿದೆ.
ಪರವೂರ್ ದೇವಾಲಯದ ಪಟಾಕಿ ದಾಸ್ತಾನು ಕೇಂದ್ರಕ್ಕೆ ಬೆಂಕಿ ಬಿದ್ದಾಗ ಅಲ್ಲಿಂದ ಪಟಾಕಿಗಳು ಏಕಕಾಲಕ್ಕೆ ಸ್ಫೋಟಗೊಂಡಿದ್ದು ಇದೇ ಕಾರಣದಿಂದಾಗಿದೆ.
ಮೊದಲನೇ ಬಾರಿ ಪಟಾಕಿಯೊಂದು ಸ್ಫೋಟಗೊಂಡಾಗ ಅಲ್ಲಿದ್ದ ಇತರ ಪಟಾಕಿಗಳು ಚೆಲ್ಲಾಪಿಲ್ಲಿಯಾಗಿ ಸ್ಫೋಟಗೊಳ್ಳುವುದಾಗಲೀ, ಬೆಂಕಿಗಾಹುತಿಯಾಗಿದ್ದಾಗಲೀ ಆಗಲಿಲ್ಲ. ಇವುಗಳೆಲ್ಲವೂ ಇದ್ದ ಸ್ಥಳದಲ್ಲೇ ಸ್ಫೋಟಗೊಂಡ ಬೆಂಕಿಯುಂಡೆಗಳಾಗಿದ್ದವು. ಪೊಟಾಷಿಯಂ ಕ್ಲೋರೇಟ್‌ನ ಸಾನಿಧ್ಯದಿಂದಲೇ ಈ ರೀತಿಯಾಗಲು ಸಾಧ್ಯ. ಇಲ್ಲವಾಗಿದ್ದಲ್ಲಿ ಉರುಳಿ ಬಾಂಬ್, ಡಬಲ್ ಸೌಂಡ್ ಪಟಾಕಿಗಳು ಚೆಲ್ಲಾಪಿಲ್ಲಿಯಾಗುತ್ತಿದ್ದವು ಎಂದು ತಜ್ಞರು ಹೇಳಿದ್ದಾರೆ.
ಆದಾಗ್ಯೂ, ಪಟಾಕಿಗಳು ಸಿಡಿಯುವಾಗ ಬಣ್ಣ ಹೊರಸೂಸುವುದಕ್ಕಾಗಿ ಕ್ಲೋರೇಟ್ ಉಪಯೋಗಿಸಲಾಗುತ್ತದೆ. ನೈಟ್ರೇಟ್ ಬಳಸಿದರೆ ಪಟಾಕಿ ಸಿಡಿಯುವಾಗ ಆ ಬೆಳಕಿಗೆ ಬಣವಿರುವುದಿಲ್ಲ. ಪಟಾಕಿ ಸಿಡಿದು ಹೊಗೆ ಸೂಸುವ ವೇಳೆ ಬಣ್ಣ ರಹಿತ ಬೆಳಕು ಕಾಣುವುದಿಲ್ಲ. ಆದ್ದರಿಂದಲೇ ಪಟಾಕಿ ತಯಾರಕರು ಕ್ಲೋರೇಟ್‌ನ್ನು ಬಳಸುತ್ತಾರೆ.
ಮಾರಕ ಸಿಡಿಮದ್ದು
ಸಾಮಾನ್ಯ ಗ್ರೆನೇಡ್‌ಗಳಿಗಿಂತ ತುಸು ಭಿನ್ನವಾಗಿರುವ ಗ್ರೆನೇಡ್‌ಗಳಾಗಿವೆ ಈ ಪಟಾಕಿಗಳು. ತೀಕ್ಷ್ಣ ತೀವ್ರತೆ ಹೊಂದಿರುವ ಇವುಗಳು ಸ್ಫೋಟಗೊಂಡರೆ 20 ಮೀಟರ್ ದೂರದಲ್ಲಿರುವ ಮನುಷ್ಯರನ್ನೂ ಕೊಲ್ಲಬಹುದು. ಗ್ರೆನೇಡ್‌ನಲ್ಲಿ ಟಿಎನ್‌ಟಿ ಅಥವಾ ಆರ್‌ಡಿಎಕ್ಸ್ ಬಳಸಿದರೆ, ಕೇರಳದಲ್ಲಿ ಬಳಸಲಾದ ಪಟಾಕಿಯಲ್ಲಿ ಪೊಟಾಷಿಯಂ ಕ್ಲೋರೇಟ್ ಅಥವಾ ಸೋಡಿಯಂ ಕ್ಲೋರೇಟ್ ನ್ನು ಬಳಸಲಾಗಿದೆ.
ಸ್ಫೋಟಕ ಬಳಕೆ ನಿಯಮ ಪ್ರಕಾರ 11 ಸದ್ದು ಹೊರಡಿಸುವ ಪಟಾಕಿಗಳನ್ನು ಮಾತ್ರ ತಯಾರಿಸಲು ಅನುಮತಿ ಇದೆ. ಇವುಗಳು ಸಿಡಿಯುವ ಕೇಂದ್ರದಿಂದ ನಾಲ್ಕು ಮೀಟರ್ ದೂರದವರೆಗೆ ಸದ್ದು 125 ಡೆಸಿಬೆಲ್ ಗಿಂತ ಹೆಚ್ಚು ಇರಬಾರದು. ಅದೇ ವೇಳೆ 23 ಕಲರ್ ಮತ್ತು ಬೆಳಕು ಸೂಸುವ ಪಟಾಕಿಗಳನ್ನು ಮಾತ್ರ ತಯಾರಿಸಲು ಭಾರತದಲ್ಲಿ ಅನುಮತಿ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


