ಈ ವರ್ಷ ಸಾಧಾರಣ ನೈರುತ್ಯ ಮಾನ್ಸೂನ್ ಮಳೆ ನಿರೀಕ್ಷೆ
ಎರಡು ವರ್ಷಗಳಿಂದ ಮಳೆ ಕೊರತೆಯಿಂದ ಬೇಸತ್ತಿರುವ ದೇಶದ ರೈತನಿಗೆ ಸಿಹಿ ಸುದ್ದಿಯಿದೆ. ಈ ಬಾರಿ ನೈರುತ್ಯ ಮಾನ್ಸೂನ್ ಮಳೆ ಸಾಧಾರಣವಾಗಿ ಬೀಳಲಿದ್ದು ಆತಂಕ ...

ನವದೆಹಲಿ: ಎರಡು ವರ್ಷಗಳಿಂದ ಮಳೆ ಕೊರತೆಯಿಂದ ಬೇಸತ್ತಿರುವ ದೇಶದ ರೈತನಿಗೆ ಸಿಹಿ ಸುದ್ದಿಯಿದೆ. ಈ ಬಾರಿ ನೈರುತ್ಯ ಮಾನ್ಸೂನ್ ಮಳೆ ಸಾಧಾರಣವಾಗಿ ಬೀಳಲಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಕೃಷಿ ಇಲಾಖೆ ತಿಳಿಸಿದೆ.
ಈ ಬಾರಿಯ ಮುಂಗಾರು ಮಳೆ ಸಾಧಾರಣವಾಗಿದ್ದು, ಎಲ್ಲಾ ರಾಜ್ಯಗಳ ರೈತರು ಕೃಷಿ ಬಿತ್ತನೆಗಾಗಿ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಬಹುದು. ಜೂನ್ ನಲ್ಲಿ ಖಾರೀಫ್ ಬೆಳೆ ಆರಂಭವಾಗಲಿದೆ.
ಈ ತಿಂಗಳ ಅಂತ್ಯದಲ್ಲಿ ಕೇಂದ್ರ ಹವಾಮಾನ ಇಲಾಖೆ ಈ ಬಾರಿಯ ಮಾನ್ಸೂನ್ ಮಳೆಯ ಸ್ಪಷ್ಟ ಚಿತ್ರಣ ನೀಡಲಿದೆ ಎಂದು ಅವರು ಹೇಳಿದ್ದಾರೆ,
ಎಲ್ ನಿನೋ ಪ್ರಭಾವ ತಗ್ಗುತ್ತಿದ್ದು ಈ ವರ್ಷ ಉತ್ತಮ ಮಾನ್ಸೂನ್ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಶೋಭನಾ ಕೆ. ಪಟ್ನಾಯಕ್ ಹೇಳಿದ್ದಾರೆ,
ಕಳೆದ ವರ್ಷ ಮಳೆಯ ಕೊರತೆಯಿಂದ ಆಹಾರ ಉತ್ಪಾದನೆಯಲ್ಲಿ ಪ್ರಗತಿ ಕುಂಠಿತವಾಗಿತ್ತು, 2014-15 ರಲ್ಲಿ ಭಾರತದ ಆಹಾರ ಉತ್ಪಾದನಾ ಪ್ರಮಾಣ 252.02 ಮಿಲಿಯನ್ ಟನ್ ಕೊರತೆಯಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


