ಅಬ್ಬಬ್ಬಾ ! 18 ತಿಂಗಳಲ್ಲಿ 108 ಕೆಜಿ ತೂಕ ಇಳಿಸಿಕೊಂಡ ಅನಂತ ಅಂಬಾನಿ
ಯಾಕೆಂದರೇ ದಡೂತಿಯಾಗಿದ್ದ ಅನಂತ್ ಅಂಬಾನಿ 18 ತಿಂಗಳಲ್ಲಿ ಬರೋಬ್ಬರೀ 108 ಕೆಜಿ ತೂಕ ಇಳಿಸಿಕೊಂಡ ಸಿನಿಮಾ ತಾರೆಯಂತೆ ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ ...

ನವದೆಹಲಿ: ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಪ್ರಕಟಿಸಿರುವ ತಮ್ಮ ಸದ್ಯದ ಭಾವಚಿತ್ರವನ್ನು ನೋಡಿ ಶಾಕ್ ಆಗದೇ ಇರಲಾರದು. ಯಾಕೆಂದರೇ ದಡೂತಿಯಾಗಿದ್ದ ಅನಂತ್ ಅಂಬಾನಿ 18 ತಿಂಗಳಲ್ಲಿ ಬರೋಬ್ಬರೀ 108 ಕೆಜಿ ತೂಕ ಇಳಿಸಿಕೊಂಡ ಸಿನಿಮಾ ತಾರೆಯಂತೆ ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ .
ಭಾರಿ ಗಾತ್ರದ ದೇಹದಿಂದ ಅವಮಾನ, ಟೀಕೆಗೆ ಒಳಗಾಗಿದ್ದ ಅವರು ಅದನ್ನು ಸವಾಲಾಗಿ ಸ್ವೀಕರಿಸಿ ಕೇವಲ 18 ತಿಂಗಳಲ್ಲಿ 108 ತೂಕವನ್ನು ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ಹೊಸ ಲುಕ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಓಡಾಡುತ್ತಿದೆ.
ಅಸ್ತಮಾದಿಂದ ಬಳಲುತ್ತಿದ್ದ ಅನಂತ್ ಚಿಕಿತ್ಸೆಗಾಗಿ ತೆಗೆದುಕೊಂಡು ಔಷಧಿಗಳ ಸೈಡ್ ಎಫೆಕ್ಟ್ ನಿಂದಾಗಿ ಹೇದ ತೂಕ ಹೆಚ್ಚಿತ್ತು. ನೈಸರ್ಗಿಕ ಮತ್ತು ಸುರಕ್ಷಿತ ರೀತಿಯಲ್ಲಿ ತೂಕವನ್ನು ಇಳಿಸಿಕೊಂಡಿರುವ ಅವರು ಕಠಿಣ ಡಯಟ್ ಮತ್ತು ದೇಹ ದಂಡಿಸುವುದರ ಮೂಲರ ಅವರು ತಮ್ಮ ದೇಹವನ್ನು ಸಣ್ಣಗಾಗಿಸಿಕೊಂಡಿದ್ದಾರೆ. ಪ್ರತಿದಿನ 21 ಕೀಲೋಮೀಟರ್ ವಾಕ್ ಮಾಡುತ್ತಿದ್ದ ಅವರು ಯೋಗ, ತೂಕ ತರಬೇತಿ ಪಡೆದು ಸಣ್ಣಗಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


