ದೇಶ

ಏಳು ಸಹೋದರಿಯರ ಮೇಲೆ ಅತ್ಯಾಚಾರ ಮಾಡಿದ್ದ ದೇವಮಾನವನಿಗೆ ಜೀವಾವಧಿ ಶಿಕ್ಷೆ

: ರೋಗ ತಡೆಗಟ್ಟುವ ನೆಪದಲ್ಲಿ ಏಳು ಮಂದಿ ಸೋದರಿಯರ ಮೇಲೆ ನಿರಂತರ ಐದು ವರ್ಷ ಕಾಲ ಅತ್ಯಾಚಾರವೆಸಗಿದ್ದ ಸ್ವಯಂ ಘೋಷಿತ ದೇವ ಮಾನವನಿಗೆ ಮುಂಬಯಿ ...

ಏಳು ಸಹೋದರಿಯರ ಮೇಲೆ ಅತ್ಯಾಚಾರ ಮಾಡಿದ್ದ ದೇವಮಾನವನಿಗೆ ಜೀವಾವಧಿ ಶಿಕ್ಷೆ
ಸಾಂದರ್ಭಿಕ ಚಿತ್ರ
Published On :

ಮುಂಬಯಿ: ರೋಗ ತಡೆಗಟ್ಟುವ ನೆಪದಲ್ಲಿ ಏಳು ಮಂದಿ ಸೋದರಿಯರ ಮೇಲೆ ನಿರಂತರ ಐದು ವರ್ಷ ಕಾಲ ಅತ್ಯಾಚಾರವೆಸಗಿದ್ದ ಸ್ವಯಂ ಘೋಷಿತ ದೇವ ಮಾನವನಿಗೆ ಮುಂಬಯಿ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಅತ್ಯಾಚಾರ, ಬಲವಂತ ಗರ್ಭಪಾತ ಹಾಗೂ ಕ್ರಿಮಿನಲ್ ಪ್ರಚೋದನೆಯ ಆಪಾದನೆಗಳು ಸಾಬೀತಾದ ಹಿನ್ನೆಲೆಯಲ್ಲಿ 43 ವರ್ಷದ ಮೆಹಂದಿ ಖಾಸಿಮ್ ಎಂಬಾತನಿಗೆ ನ್ಯಾಯಾಧೀಶರಾದ ವೈಶಾಲಿ ಜೋಷಿ ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ನಾಲ್ಕು ಮಂದಿ ಸಹೋದರಿಯರಿಗೆ ಆರೋಗ್ಯವಂತ ಹೆಣ್ಣು ಮಕಕ್ಕಳ  ಜತೆಗೆ ಮಾನಸಿಕ ಅಸ್ವಸ್ಥ ಪುತ್ರರು ಇರುವ ಕುಟುಂಬವೊಂದರ ಬಗ್ಗೆ ಖಾಸಿಮ್‌ಗೆ ತಿಳಿದಿತ್ತು. ಮೊದಲು ಗಂಡು ಮಕ್ಕಳ ರೋಗ ವಾಸಿ ಮಾಡುವುದಾಗಿ ಭರವಸೆ ನೀಡಿದ ಖಾಸಿಂ, ಭವಿಷ್ಯದಲ್ಲಿ ಹೆಣ್ಣು ಮಕ್ಕಳ ಹೊಟ್ಟೆಯಲ್ಲಿ ಮಾನಸಿಕ ಅಸ್ವಸ್ಥ ಮಕ್ಕಳು ಹುಟ್ಟುವುದನ್ನು ತಡೆಗಟ್ಟುವ ಚಿಕಿತ್ಸೆ ನೀಡುವುದಾಗಿ ಹೇಳಿ ಏಳು ಸಹೋದರಿಯರನ್ನು ಕರೆಸಿಕೊಂಡಿದ್ದ.

ಅವರಿಗೆಲ್ಲ ಮದ್ದು ಬೆರೆಸಿದ ಪಾನೀಯ ಕುಡಿಯಲು ಕೊಟ್ಟು ಅತ್ಯಾಚಾರವೆಸಗುತ್ತಿದ್ದ. ಅವರಲ್ಲಿ ಇಬ್ಬರು ಗರ್ಭಿಣಿಯರಾಗಿರುವುದು ತಿಳಿದಾಗ, ಅವರಿಗೆ ಗರ್ಭಪಾತವನ್ನೂ ಮಾಡಿಸಿದ್ದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.