ಹಳತಾಯಿತು ಪೇಯ್ಡ್ ನ್ಯೂಸ್, ಈಗೇನಿದ್ದರೂ ಪೇಯ್ಡ್ ವ್ಯೂಸ್!
ಪೇಯ್ಡ್ ನ್ಯೂಸ್ ಬಗ್ಗೆ ಕೇಳಿದ್ದೀರಿ, ಆದರೆ ಪೇಯ್ಡ್ ವ್ಯೂಸ್( ನಿಲುವುಗಳು) ಬಗ್ಗೆ ಕೇಳಿದ್ದೀರಾ? ಕೇಳಿರದೇ ಇದ್ದರೆ ಈಗ ತಿಳಿದುಕೊಳ್ಳಿ.

ಚೆನ್ನೈ: ಪೇಯ್ಡ್ ನ್ಯೂಸ್ ಬಗ್ಗೆ ಕೇಳಿದ್ದೀರಿ, ಆದರೆ ಪೇಯ್ಡ್ ವ್ಯೂಸ್( ನಿಲುವುಗಳು) ಬಗ್ಗೆ ಕೇಳಿದ್ದೀರಾ? ಕೇಳಿರದೇ ಇದ್ದರೆ ಈಗ ತಿಳಿದುಕೊಳ್ಳಿ. ಚುನಾವಣೆ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಹಣ ಕೊಟ್ಟು ತಮ್ಮ ಪರ ಸುದ್ದಿ ಬಿತ್ತರಿಸುವುದು ಈಗ ಹಳತಾಗಿದೆ. ಈಗೇನಿದ್ದರೂ ಪೇಯ್ಡ್ ವ್ಯೂಸ್ ಜಮಾನ. ಈ ಪೇಯ್ಡ್ ವ್ಯೂಸ್ ಪರಿಕಲ್ಪನೆ ಪ್ರಾರಂಭವಾಗಿರುವುದು ತಮಿಳುನಾಡಿನಲ್ಲಿ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾ ರೂಢ ಎಐಎಡಿಎಂ ಕೆ ಪಕ್ಷದ ವಿರುದ್ಧ ಈ ಬಾರಿ ಶತಾಯಗತಾಯ ಗೆಲ್ಲಬೇಕೆಂದು ತಂತ್ರ ರೂಪಿಸುತ್ತಿರುವ ಡಿಎಂಕೆ ಪಕ್ಷ ರಾಜಕೀಯ ಪಕ್ಷಗಳ ಕುರಿತು ಬ್ಲಾಗರ್ ಗಳ ನಿಲುವುಗಳಿಗೂ ಹಣ ನೀಡಲು ಮುಂದಾಗಿದೆ. ತಮಿಳುನಾಡಿನ ಮತದಾರರ ಪೈಕಿ ಕಾಲು ಭಾಗದಷ್ಟು ಜನರು 30 ವರ್ಷದೊಳಗಿನವರಾಗಿದ್ದು, ತಂತ್ರಜ್ಞಾನದ ನೆರವಿನೊಂದಿಗೆ ಆಡಳಿತಾರೂಢ ಪಕ್ಷ ಎಐಎಡಿಎಂಕೆ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುವಂತೆ ಮಾಡಲು ಡಿಎಂಕೆ ಕಂಡುಕೊಂಡಿರುವ ಮಾರ್ಗವೇ ಈ ಪೇಯ್ಡ್ ವ್ಯೂಸ್ ಕಾನ್ಸೆಪ್ಟ್.
ಈ ಕೆಲಸಕ್ಕಾಗಿ ಮುಂಬೈ ಮೂಲದ ಕಂಪನಿಯೊಂದರ ನೆರವು ಪಡೆದಿರುವ ಡಿಎಂಕೆ ಪಕ್ಷ, ಚೆನ್ನೈ ಮೂಲದ ಬ್ಲಾಗರ್ ಗಳ ಆನ್ ಲೈನ್ ಬ್ಲಾಗಿಂಗ್ ತಂಡದಿಂದ ಬ್ಲಾಗ್ ಮೂಲಕ ಅಂಕಿ- ಅಂಶ ಸಮೇತ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಪೇಯ್ಡ್ ವ್ಯೂಸ್ ಗಾಗಿ ಬ್ಲಾಗರ್ ಗಳು ಮಾಡಬೇಕಾಗಿರುವುದಿಷ್ಟೆ. ಮುಂಬೈ ಮೂಲದ ಕಂಪನಿ ಎಐಎಡಿಎಂಕೆ ಪಕ್ಷ( ಸರ್ಕಾರದ)ದ ಕುರಿತು ಅಂಕಿ-ಅಂಶಗಳ ಸಹಿತ ಇರುವ ಮಾಹಿತಿಗಳ ನ್ನು ಇ-ಮೇಲ್ ಕಳಿಸುತ್ತದೆ. ಈ ಮಾಹಿತಿಗಳನ್ನು ಬ್ಲಾಗ್ ನಲ್ಲಿ ಅಪ್ ಡೇಟ್ ಮಾಡಬೇಕು, ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಬೇಕು. ಈ ರೀತಿ ಮಾಡಿದ ಬ್ಲಾಗರ್ ಗಳಿಗೆ ಪ್ರತಿ ದಿನಕ್ಕೆ 300 ರೂ ಪಾವತಿ ಮಾಡಲಾಗುತ್ತದೆ. ಮುಂಬೈ ಮೂಲದ ಕಂಪನಿಯಿಂದ ಏ.6 ರಂದು ಸುಮಾರು 100 ಬ್ಲಾಗರ್ ಗಳು ಇ-ಮೇಲ್ ಪಡೆದಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


