ದೇಶ

ಮೋದಿ ಕನಸಿನ ವ್ಯಾಪಾರಿ ಮನಮೋಹನ್ ಸಿಂಗ್ ವ್ಯಂಗ್ಯ

ನರೇಂದ್ರ ಮೋದಿ ಕನಸುಗಳನ್ನು ಬಿತ್ತಿ ಜನರಿಗೆ ವಂಚನೆ ಮಾಡುವ ' ಕನಸಿನ ವ್ಯಾಪಾರಿ' ಎಂದು ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ....

ಮೋದಿ ಕನಸಿನ ವ್ಯಾಪಾರಿ ಮನಮೋಹನ್ ಸಿಂಗ್ ವ್ಯಂಗ್ಯ
ಮನಮೋಹನ್ ಸಿಂಗ್
Published On :

ಗುವಾಹಟಿ: ನರೇಂದ್ರ ಮೋದಿ ಕನಸುಗಳನ್ನು ಬಿತ್ತಿ ಜನರಿಗೆ ವಂಚನೆ ಮಾಡುವ ' ಕನಸಿನ ವ್ಯಾಪಾರಿ'  ಎಂದು ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಆರೋಪಿಸಿದ್ದಾರೆ.

ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ನಿಮಿತ್ತ ಪ್ರಚಾರ ನಡೆಸುತ್ತ ಮಾತನಾಡುತ್ತಿದ್ದ ಮನಮೋಹನ್ ಸಿಂಗ್, ಮೋದಿ ಅವರ ಪಾಕ್ ನೀತಿ ಕುಂಟುತ್ತ ಸಾಗಿದೆ, ದೇಶದ ಜನರಿಗೆ ತಾವು ಮಾಡಿದ್ದ ವಾಗ್ದಾನಗಳನ್ನು ಪೂರೈಸುವಲ್ಲಿ ಮೋದಿ ಅವರು ವಿಫಲರಾಗಿದ್ದಾರೆ ಎಂದು  ಆರೋಪಿಸಿದ್ದಾರೆ.

ಪಾಕಿಸ್ತಾನದ ಭಯೋತ್ಪಾದಕರು ಕೇವಲ ಜಮ್ಮು ಮತ್ತು ಕಾಶ್ಮೀರದಲ್ಲಷ್ಟೇ ಅಲ್ಲ ಪಂಜಾಬ್ ಮತ್ತು ನೆರೆಯ ರಾಜ್ಯಗಳಲ್ಲಿ ಯಾವ ಅಡೆತಡೆ ಇಲ್ಲದೆ ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ಸಿಂಗ್ ದೂರಿದ್ದಾರೆ. 

ಇತ್ತೀಚಿಗೆ ನಡೆದ ಪಠಾಣ್‌ಕೋಟ್ ದಾಳಿ ನಮ್ಮ ದುರ್ಬಲತೆಗೆ ತಾಜಾ ಉದಾಹರಣೆ ಎಂದ ಅವರು ಕಳೆದ ಎರಡು ವರ್ಷಗಳಲ್ಲಿ ಭಾರತದ ರೈತರು ದೊಡ್ಡ ಪ್ರಮಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.