'ಝಿಕಾ' ವೈರಸ್ ರಚನೆ ಪತ್ತೆ ತಂಡದಲ್ಲಿ ಭಾರತದ ಮಹಿಳೆ: ಅಭಿನಂದಿಸಿದ ರಾಜನಾಥ ಸಿಂಗ್
ಇಡೀ ವಿಶ್ವವನ್ನೇ ನಡುಗಿಸುತ್ತಿರುವ ಭಯಾನಕ 'ಝಿಕಾ' ವೈರಸ್ ರಚನೆ ಪತ್ತೆ ತಂಡದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಉತ್ತರ ಪ್ರದೇಶದ ದೇವಿಕಾ ಸಿರೋಹಿ ಅವರಿಗೆ...

ನವದೆಹಲಿ: ಇಡೀ ವಿಶ್ವವನ್ನೇ ನಡುಗಿಸುತ್ತಿರುವ ಭಯಾನಕ 'ಝಿಕಾ' ವೈರಸ್ ರಚನೆ ಪತ್ತೆ ತಂಡದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಉತ್ತರ ಪ್ರದೇಶದ ದೇವಿಕಾ ಸಿರೋಹಿ ಅವರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿದ್ದ ಝಿಕಾ ವೈರಸ್ ರಚನೆಯನ್ನು ಇದೇ ಮೊಟ್ಟ ಮೊದಲ ಬಾರಿಗೆ ಸಪ್ತ ಸದಸ್ಯ ಸಂಶೋಧಕರ ತಂಡವೊಂದು ಭೇದಿಸಿದ್ದು. ಈ ತಂಡದ ಸದಸ್ಯರಲ್ಲಿ ಭಾರತದ ವೈದ್ಯಕೀಯ ಸಂಶೋಧನಾ ವಿದ್ಯಾರ್ಥಿನಿಯಾಗಿರುವ ಉತ್ತರ ಪ್ರದೇಶದ ಮೀರತ್ ನಗರದ ದೇವಿಕಾ ಸಿರೋಹಿ ಕೂಡ ಒಬ್ಬರಾಗಿ ಕಾರ್ಯನಿರ್ವಹಿಸಿ, ಮಹತ್ವದ ಕೊಡುಗೆಯನ್ನು ನೀಡಿದ್ದಾರೆ.
ದೇವಿಕಾ ಸಿರೋಹಿ ಅವರಿಗೆ ಟ್ವಿಟರ್ ನಲ್ಲಿ ಅಭಿನಂದನೆ ಸಲ್ಲಿಸಿರುವ ಗೃಹ ಸಚಿವರು, ಝಿಕಾ ವೈರಸ್ ರಚನೆಯನ್ನು ಭೇದಿಸಿದ ಅಮೆರಿದ ತಂಡದ ಸದಸ್ಯರಲ್ಲಿ ಕಾರ್ಯನಿರ್ವಹಿಸಿದ ಮೀರತ್ ನ ದೇವಿಕಾ ಸಿರೋಹಿಗೆ ಅಭಿನಂದನೆಗಳು. ದೇವಿಕಾ ಅವರು ಕೇವಲ ಅವರ ಕುಟುಂಬಕ್ಕಷ್ಟೇ ಅಲ್ಲದೆ, ಇಡೀ ದೇಶ ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಿದ್ದಾರೆ. ದೇವಿಕಾ ಅವರ ಈ ಸಾಧನೆ ಹೆಣ್ಣು ಮಕ್ಕಳಿಗಿರುವ ಶಿಕ್ಷಣ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ನಮ್ಮ ಗಮನ 'ಬೇಟಿ ಬಚಾವೋ' 'ಬೇಟಿ ಪಡಾವೋ' ಕಡೆಯಿರಬೇಕೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


