ರಾಷ್ಟ್ರ ವಿರೋಧಿ ಮನಸ್ಸುಳ್ಳ ಕಾಂಗ್ರೆಸ್'ಗೆ ತಕ್ಕ ಪಾಠ ಕಲಿಸಬೇಕು: ಬಿಜೆಪಿ
ರಾಷ್ಟ್ರ ವಿರೋಧಿ ಮನಸ್ಸುಳ್ಳ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಬೇಕು ಎಂದು ಜನತೆಗೆ ಬಿಜೆಪಿ ಸೋಮವಾರ ಹೇಳಿದೆ...

ಅಹ್ಮದಾಬಾದ್: ರಾಷ್ಟ್ರ ವಿರೋಧಿ ಮನಸ್ಸುಳ್ಳ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಬೇಕು ಎಂದು ಜನತೆಗೆ ಬಿಜೆಪಿ ಸೋಮವಾರ ಹೇಳಿದೆ.
ಗಾಂಧಿನಗರದಲ್ಲಿ ನಿನ್ನೆ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿರುವ ಗುಜರಾತ್ ನ ಬಿಜೆಪಿ ನಾಯಕರು, ಜೆಎನ್ ಯು ಆವರಣದಲ್ಲಿ ಭಾರತದ ವಿರುದ್ಧ ಘೋಷಣೆಗಳನ್ನು ಕೂಗಲಾಗಿತ್ತು. ಆದರೆ ದೇಶ ವಿರೋಧ ಘೋಷಣೆ ಕೂಗಿದವರ ಪರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬೆಂಬಲ ವ್ಯಕ್ತಪಡಿಸಿದರು.
ವಿವಿ ಆವರಣದಲ್ಲಿ ಸಂಸತ್ತು ದಾಳಿಕೋರ ಅಫ್ಜಲ್ ಗುರು ಪರವಾಗಿ ಘೋಷಣೆ ಕೂಗಲಾಗಿತ್ತು. ಅಲ್ಲದೆ, ಹಿಂದೂಸ್ತಾನ ಮುರ್ದಾಬಾದ್ ಎಂದು ಹೇಳಲಾಗಿತ್ತು. ಇಂತಹ ವಿದ್ಯಾರ್ಥಿಗಳನ್ನು ಬೆಂಬಲಿಸಲು ರಾಹುಲ್ ಗಾಂಧಿ ಹಾಗೂ ಇನ್ನಿತರೆ ಕಾಂಗ್ರೆಸ್ ನಾಯಕರು ವಿವಿ ಆವರಣಕ್ಕೆ ಭೇಟಿ ನೀಡಿದ್ದರು. ಈ ರೀತಿಯ ವರ್ತನೆಯಿಂದ ದೇಶದ ಜನತೆಗೆ ಯಾವ ಸಂದೇಶವನ್ನು ಸಾರಲು ಹೊರಟಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಇನ್ನು ದೇಶದಲ್ಲಿ ಇದೀಗ ಭಾರತ್ ಮಾತಾ ಕಿ ಜೈ ಎಂಬ ವಿವಾದ ಕೂಡ ಸಾಗುತ್ತಿದೆ. ಕಾಂಗ್ರೆಸ್ ಪಕ್ಷ ದೇಶದ ಜನತೆಯನ್ನು ಇಬ್ಬಾಗ ಮಾಡಲು ಯತ್ನಿಸುತ್ತಿದ್ದು, ಇದಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ನಿಯಮವನ್ನು ಜನತೆ ಮೇಲೆ ಹೇರುವ ಮೂಲಕ ದೇಶಭಕ್ತಿಯ ಘೋಷಣೆಗಳನ್ನು ವಿರೋಧಿಸುತ್ತಿದೆ ಎಂದು ಹೇಳಿದ್ದಾರೆ.
ದೇಶಭಕ್ತಿ ಎಂಬುದು ಆಯ್ಕೆಯ ವಿಚಾರವಲ್ಲ ಎಂದು ಬಿಜೆಪಿ ನಂಬುತ್ತದೆ. ಭಾರತ್ ಮಾತಾ ಕಿ ಜೈ ಹಾಗೂ ವಂದೇ ಮಾತರಂ ನಂತಹ ದೇಶದ ಪರ ಘೋಷಣೆಯನ್ನು ವಿರೋಧಿಸಿರುವ ಮೂಲಕ ಕಾಂಗ್ರೆಸ್ ಭಾರತೀಯರ ಭಾವನೆಗಳಿಗೆ ನೋವುಂಟು ಮಾಡುತ್ತಿದೆ. ಇಂತಹ ವೋಟ್ ಬ್ಯಾಂಕ್ ರಾಜಕಾರಣವನ್ನು ಹಾಗೂ ದೇಶ ವಿರೋಧಿ ಮನಸ್ಸುಳ್ಳ ಕಾಂಗ್ರೆಸ್ ನ್ನು ಸಮಿತಿ ಖಂಡಿಸುತ್ತದೆ ಎಂದಿದ್ದಾರೆ.
ಸಮಿತಿ ಕಾರ್ಯಕಾರಿ ಸಭೆ ಇಂತಹ ದೇಶ ವಿರೋಧಿ ಚಟುವಟಿಕೆ ನಡೆಸುವವರ ಹಾಗೂ ಪೋಷಣೆ ಮಾಡುವವರ ವಿರುದ್ಧ ಹೋರಾಡುತ್ತದೆ. ಭಾರತದ ಸಮುದಾಯ ಹಾಗೂ ಸಾರ್ವಭೌಮತ್ವವನ್ನು ರಕ್ಷಿಸುವ ಸಲುವಾಗಿ ಜನತೆ ದೇಶ ವಿರೋಧಿ ಮನಸ್ಸುಳ್ಳ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


