ಸೌದಿ ದೊರೆ ಕಾಲಿಗೆ ಮೋದಿ ಬೀಳುತ್ತಿರುವ ಫೋಟೋ ಪ್ರಕಟಿಸಿದ್ದ ಪತ್ರಕರ್ತನ ವಿರುದ್ಧ ದೂರು
ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾ ಪ್ರವಾಸ ಮುಗಿಸಿ ವಾಪಸ್ಸಾಗಿದ್ದಾರೆ. ಆದರೆ ಸಿಎನ್‌ಎನ್- ಐಬಿಎನ್ ಸುದ್ದಿವಾಹಿನಿಯ ಪತ್ರಕರ್ತ ರಾಘವ್...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾ ಪ್ರವಾಸ ಮುಗಿಸಿ ವಾಪಸ್ಸಾಗಿದ್ದಾರೆ. ಆದರೆ ಸಿಎನ್‌ಎನ್- ಐಬಿಎನ್ ಸುದ್ದಿವಾಹಿನಿಯ ಪತ್ರಕರ್ತ ರಾಘವ್ ಚೋಪ್ರಾ ಅವರು ಮೋದಿ ಅವರು ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರ ಪಾದ ಸ್ಪರ್ಶಿಸಲು ಬಗ್ಗಿರುವ ರೀತಿಯಲ್ಲಿರುವ ತಿರುಚಿದ ಫೋಟೋವೊಂದನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿ ವಿವಾದಕ್ಕೆ ಸಿಲುಕಿದ್ದಾರೆ.
ರಾಘವ್ ಚೋಪ್ರಾ ಅವರ ಕೃತ್ಯ ಬಗ್ಗೆ ಬಿಜೆಪಿ ಸಂಸದ ಮಹೇಶ್ ಗಿರಿ ಅವರು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಗಮನಕ್ಕೆ ತಂದಿದ್ದರು. ಬಳಿಕ ಬಿಜೆಪಿಯ ತಾಂತ್ರಿಕ ಘಟಕ ದೆಹಲಿ ಸೈಬರ್ ಪೊಲೀಸರಿಗೆ ದೂರು ನೀಡಿದೆ.
ಈ ಹಿಂದೆ ಬಿಜೆಪಿ ವರಿಷ್ಠ ನಾಯಕ ಅಡ್ವಾಣಿ ಕಾಲಿಗೆ ಮೋದಿ ಬೀಳಲು ಬಗ್ಗಿರುವ ಫೋಟೋ ಬಳಸಿ, ಅಡ್ವಾಣಿ ಜಾಗದಲ್ಲಿ ಸಲ್ಮಾನ್ ಅವರನ್ನು ಈ ಫೋಟೋದಲ್ಲಿ ಚಿತ್ರಿಸಲಾಗಿತ್ತು. ಇದನ್ನು ರಾಘವ್ ಚೋಪ್ರಾ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರು. ಈ ರೀತಿ ಫೋಟೋ ಪ್ರಕಟಿಸಿದ್ದಕ್ಕೆ ಪತ್ರಕರ್ತ ರಾಘವ್ ಚೋಪ್ರಾ ವಿಷಾದ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


