ಭಾರತದ ಮದ್ಯಮುಕ್ತ ರಾಜ್ಯಗಳಲ್ಲಿ ಬಿಹಾರಕ್ಕೆ 4ನೇ ಸ್ಥಾನ
ಬಿಹಾರ ರಾಜ್ಯದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಿದ್ದು, ಬಿಹಾರ ಇದೀಗ ಭಾರತದ ಮದ್ಯಮುಕ್ತ ರಾಜ್ಯಗಳಲ್ಲಿ 4ನೇ ಸ್ಥಾನವನ್ನು...

ನವದೆಹಲಿ: ಬಿಹಾರ ರಾಜ್ಯದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಿದ್ದು, ಬಿಹಾರ ಇದೀಗ ಭಾರತದ ಮದ್ಯಮುಕ್ತ ರಾಜ್ಯಗಳಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ.
ಭಾರತದಲ್ಲಿ ಈಗಾಗಲೇ ಗುಜರಾತ್, ಕೇರಳ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಇದೀಗ ಇದೇ ಗುಂಪಿಗೆ ಬಿಹಾರ ಕೂಡ ಸೇರ್ಪಡೆಗೊಂಡಿದ್ದು, ಮದ್ಯ ಮುಕ್ತ ರಾಜ್ಯಗಳ ಪೈಕಿ ಬಿಹಾರ 4ನೇ ಸ್ಥಾನವನ್ನು ಪಡೆದುಕೊಂಡಿದೆ.
ಸಂಪೂರ್ಣ ಮದ್ಯ ನಿಷೇಧದ ಕುರಿತಂತೆ ಮಾತನಾಡಿರುವ ನಿತೀಶ್ ಕುಮಾರ್ ಅವರು, ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧ ಹೇರಲಾಗಿದ್ದು, ಹೋಟೆಲ್ ಮತ್ತು ಬಾರ್ ಗಳಲ್ಲಿ ಮದ್ಯ ದೊರಕುವುದಿಲ್ಲ. ಇನ್ನು ಮುಂದೆ ರಾಜ್ಯ ಸರ್ಕಾರ ಮದ್ಯ ಮಾರಾಟ ಅಂಗಡಿಗಳಿಗೆ ಪರವಾನಗಿಯನ್ನು ನೀಡುವುದಿಲ್ಲ. ಆದರೆ, ಸೇನಾ ಕ್ಯಾಂಟೀನ್ ಗಳಲ್ಲಿ ಮಾತ್ರ ಮದ್ಯ ಮಾರಾಟ ಎಂದಿನಂತೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಮದ್ಯಪಾನ ನಿಷೇಧ ಜಾರಿ ಮಾಡುವುದಾಗಿ ಭರವಸೆಯನ್ನು ನೀಡಿದ್ದರು. ಇದೀಗ ಈ ಭರವಸೆಯನ್ನು ಈಡೇರಿಸಿದ್ದಾರೆ.
ಈ ಹಿಂದಷ್ಟೇ ಮೊದಲ ಹಂತದಲ್ಲಿ ಮದ್ಯ ನಿಷೇಧ ಮಾಡುವ ಮೂಲಕ ಬಿಹಾರ ಸರ್ಕಾರ ಪರೀಕ್ಷೆ ನಡೆಸಿತ್ತು. ಸರ್ಕಾರದ ನಿಷೇಧ ಜಾರಿಗೆ ಸಾರ್ವಜನಿಕರಿಂದ ಉತ್ತಮವಾಗಿ ಬೆಂಬಲ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧಕ್ಕೆ ಆದೇಶ ಹೊರಡಿಸಿದ್ದಾರೆ. ಮದ್ಯ ನಿಷೇಧಕ್ಕೆ ಮಹಿಳೆಯರು ಹಾಗೂ ಮಕ್ಕಳಿಂದ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ.
ಇನ್ನು ಸರ್ಕಾರದ ಆದೇಶವನ್ನು ತಿರಸ್ಕರಿಸಿ ಯಾರಾದರೂ ಮದ್ಯಪಾನ ಅಥವಾ ಮಾರಾಟ ಮಾಡಿದರೆ ಕಠಿಣ ಶಿಕ್ಷೆ ನೀಡಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಇದಕ್ಕಾಗಿ ಸಾರ್ವಜನಿಕರು ದೂರು ದಾಖಲಿಸಲು ಉಚಿತ ದೂರವಾಣಿ ಸಂಖ್ಯೆಯನ್ನು ನೀಡಿದೆ. ಬಿಹಾರದಲ್ಲಿ ಇನ್ನು ಮುಂದೆ ಯಾರಾದರೂ ಸರ್ಕಾರದ ಆದೇಶ ನಿರ್ಲಕ್ಷಿಸಿ ಮದ್ಯಾಪಾನ ಮಾಡಿದರೆ 15545 ಮತ್ತು 18003456288ಕ್ಕೆ ಉಚಿತವಾಗಿ ಕರೆ ಮಾಡಿ ಸರ್ಕಾರಕ್ಕೆ ಮಾಹಿತಿ ನೀಡಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


