ಓಡಿ ಹೋಗಿದ್ದ 5 ವರ್ಷದ ಬಾಲಕನನ್ನು 7 ವರ್ಷಗಳ ನಂತರ ಪೋಷಕರ ಮಡಿಲು ಸೇರಿಸಿದ ಪೊಲೀಸರು
5 ವರ್ಷದವನಾಗಿದ್ದಾಗ ಮಾಡಿದ್ದ ಸಣ್ಣ ಕಳ್ಳತನಕ್ಕೆ ಹೆದರಿ ಮನೆ ಬಿಟ್ಟು ಹೋಗಿದ್ದ ಬಾಲಕ ಮತ್ತೆ 7 ವರ್ಷಗಳ ನಂತರ ಹೆತ್ತವರ ಮಡಿಲು ಸೇರಿದ ಘಟನೆ ಬಿಹಾರದ ...

ಕೊರಾಪುಟ್: 5 ವರ್ಷದವನಾಗಿದ್ದಾಗ ಮಾಡಿದ್ದ ಸಣ್ಣ ಕಳ್ಳತನಕ್ಕೆ ಹೆದರಿ ಮನೆ ಬಿಟ್ಟು ಹೋಗಿದ್ದ ಬಾಲಕ ಮತ್ತೆ 7 ವರ್ಷಗಳ ನಂತರ ಹೆತ್ತವರ ಮಡಿಲು ಸೇರಿದ ಘಟನೆ ಬಿಹಾರದ ಅಂಬುಗಡ ಗ್ರಾಮದಲ್ಲಿ ನಡೆದಿದೆ.
ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಗವರ್ದನ ಜಿಲ್ಲೆಯ ಲುಕಿ ಠಾಕೂರ್ ಎಂಬುವ ಪುತ್ರ ಅನೂಪ್ ಠಾಕೂರ್ 5 ವರ್ಷದವನಿದ್ದಾಗ ಮನೆಯಲ್ಲಿ ಸಣ್ಣ ಕಳ್ಳತನ ಮಾಡಿ ಮನೆ ಬಿಟ್ಟು ಓಡಿ ಹೋಗಿದ್ದ.
ಮನೆಯಿಂದ ಹೊರಟ ಅನೂಪ್ ರೈಲು ಹತ್ತಿ ವಿಶಾಖಪಟ್ಟಣ ತಲುಪಿದ್ದ ನಂತರ ವಿಶಾಖ ಪಟ್ಟಣ ರೈಲ್ವೆ ನಿಲ್ದಾಣದಲ್ಲಿ ಅಲೆಯುತ್ತಿದ್ದ ಅನೂಪ್ ನನ್ನು ಬುಡಕಟ್ಟು ಜನಾಂಗದ ಕಾರ್ಮಿಕಕ ಕುಟುಂಬವೊಂದು ತಮ್ಮ ಮನೆಗೆ ಕರೆದು ಕೊಂಡು ಹೋಗಿತ್ತು.
ನಂತರ ಅಜಿತ್ ಶಾ ಎಂಬುವರು ಅನೂಪ್ ನನ್ನು ದತ್ತು ತೆಗೆದುಕೊಂಡಿದ್ದರು. ಇತ್ತೀಚೆಗೆ ಅಜಿತ್ ಶಾ ಮನೆಯ ಅಕ್ಕಪಕ್ಕದ ನಿವಾಸಿಗಳು ಅನೂಪ್ ಮನೆ ವಿಳಾಸ ಕೇಳಿದ್ದಾರೆ. ತನ್ನ ಊರು, ತಂದೆಯ ಹೆಸರನ್ನು ಅನೂಪ್ ಹೇಳಿದ್ದಾನೆ. ನಂತರ ನಿವಾಸಿಗಳು ಅಂಬುಗಡ ಪೊಲೀಸರಿಗೆ ವಿಯ ತಿಳಿಸಿದ್ದಾರೆ.
ಇದಾದ ನಂತರ ಪೊಲೀಸರು ಅನೂಪ್ ತಂದೆಗೆ ವಿಷಯ ತಿಳಿಸಿದ್ದಾರೆ. ನಂತರ ಅನೂಪ್ ತಂದೆ ಎಲ್ಲಾ ಕಾನೂನು ನಿಯಮಗಳನ್ನು ಪೂರೈಸಿ ಮಗನನ್ನು ವಾಪಸ್ ತಮ್ಮ ಮನೆಗೆ ಕರೆದೊಯ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


