ಸರ್ಕಾರಿ ಜಾಹಿರಾತು: ಮನೀಶ್ ಸಿಸೋಡಿಯಾ ಸಂಬಂಧಿಕರಿಗೆ ಗುತ್ತಿಗೆ ನೀಡಿರುವ ಆರೋಪ
ದೆಹಲಿ ಸರ್ಕಾರದ ಜಾಹಿರಾತುಗಳಿಗಾಗಿ ಮನೀಶ್ ಸಿಸೋಡಿಯಾ ಅವರ ಕುಟುಂಬ ಸದಸ್ಯರಿಗೆ ಗುತ್ತಿಗೆ ನೀಡಲಾಗಿರುವ ಬಗ್ಗೆ ದೂರು...

ದೆಹಲಿ ಸರ್ಕಾರದ ಜಾಹಿರಾತುಗಳಿಗಾಗಿ ಮನೀಶ್ ಸಿಸೋಡಿಯಾ ಅವರ ಕುಟುಂಬ ಸದಸ್ಯರಿಗೆ ಗುತ್ತಿಗೆ ನೀಡಲಾಗಿರುವ ಬಗ್ಗೆ ದೂರು ಬಂದಿದೆ ಎಂದು ದೆಹಲಿ ಭ್ರಷ್ಟಾಚಾರ ನಿಗ್ರಹ ದಳ ಜಂಟಿ ಆಯುಕ್ತ ಮುಖೇಶ್ ಕುಮಾರ್ ಮೀನ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಮೀನ, ದೂರಿನ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಸಂಬಂಧಿಕರಿಗೆ ಗುತ್ತಿಗೆ ನೀಡಿರುವುದರ ಬಗ್ಗೆ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯಕ್ಕೆ ನೊಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದೆಹಲಿ ಭ್ರಷ್ಟಾಚಾರ ನಿಗ್ರಹ ದಳ ಜಂಟಿ ಆಯುಕ್ತರಿಗೂ ಸರ್ಕಾರಕ್ಕೂ ಭಿನ್ನಾಭಿಪ್ರಾಯಗಳಿದ್ದು ಎಸಿಬಿಗೆ ಇಬ್ಬರು ಮುಖ್ಯಸ್ಥರು ನೇಮಕವಾಗಿದ್ದಾರೆ. ಮುಖೇಶ್ ಕುಮಾರ್ ಮೀನ ಅವರನ್ನು ದೆಹಲಿ ಲೆಫ್ಟಿನೆಂಟ್ ಗೌರ್ನರ್ ನಜೀಬ್ ಜಂಗ್ ನೇಮಕ ಮಾಡಿದ್ದರೆ. ದೆಹಲಿ ಸರ್ಕಾರ ಎಸ್ ಎಸ್ ಯಾದವ್ ಅವರನ್ನು ನೇಮಕ ಮಾಡಿದೆ.
ದೆಹಲಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಜಾಹಿರಾತು ಪ್ರಕಟಿಸಲು ಸುಮರು 526 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು. ಜಾಹಿರಾತಿಗಾಗಿ 526 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದ ಆಮ್ ಆದ್ಮಿ ಪಕ್ಷದ ಕ್ರಮವನ್ನು ವಿರೋಧಪಕ್ಷಗಳು ಟೀಕಿಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


