ಗಾಂಧಿ ಜತೆ ಮೋದಿ ಹೋಲಿಕೆ ಪೋಸ್ಟರ್: ವಿವಾದಕ್ಕೀಡಾದ ಬಿಜೆಪಿ ನಾಯಕ
ಬಿಜೆಪಿ ನಾಯಕರೊಬ್ಬರು ಮಹಾತ್ಮ ಗಾಂಧೀಜಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲಿಕೆ ಮಾಡಿದ ಪೋಸ್ಟರ್...

ನವದೆಹಲಿ: ಬಿಜೆಪಿ ನಾಯಕರೊಬ್ಬರು ಮಹಾತ್ಮ ಗಾಂಧೀಜಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲಿಕೆ ಮಾಡಿದ ಪೋಸ್ಟರ್ ಒಂದನ್ನು ಪ್ರಕಟಿಸುವ ಮೂಲಕ ವಿವಾದಕ್ಕೀಡಾಗಿದ್ದು, ವಿರೋಧ ಪಕ್ಷಗಳ ಕೆಂಣ್ಣಿಗೆ ಗುರಿಯಾಗಿದ್ದಾರೆ.
ಬಿಜೆಪಿ ನಾಯಕ ವಿಜಯ್ ಗೋಯಲ್ ತನ್ನ ನಿವಾಸದ ಬಳಿ ಈ ಪೋಸ್ಟರ್ ಹಾಕಿಸಿದ್ದು, ಪ್ರಧಾನಿ ಮೋದಿಯವರು ಸಬರ್ ಮತಿಯಿಂದ ಬಂದ ಸಂತ ಎಂದು ಪೋಸ್ಟರ್ ನಲ್ಲಿ ಪ್ರಕಟವಾಗಿದೆ. ಆದರೆ, ಗೋಯಲ್ ಅವರ ಈ ನಡೆಗೆ ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಸಮರ್ಥನೆ ನೀಡಿರುವ ಗೋಯಲ್, ಗಾಂಧೀಜಿ ಏನು ಮಾಡಿದ್ದಾರೆ? ಮತ್ತು ಮೋದೀಜಿಯವರು ಏನು ಮಾಡಿದ್ದಾರೆ? ಎಂಬುದನ್ನು ನಾನು ತಿಳಿಸಿದ್ದೇನೆ. ಇಬ್ಬರೂ ಸಬರ್ ಮತಿಯಿಂದ ಬಂದವರಾಗಿದ್ದಾರೆ. ಇಷ್ಟೇ ಅಲ್ಲದೇ, ಮೋದಿ ಅವರು ಗಾಂಧಿ ತೋರಿದ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಹಾಗಾಗಿ, ಮೋದಿ ಮಾಡಿರುವ ಕೆಲಸಗಳ ಬಗ್ಗೆ ಹೇಳಿದ್ದೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


