ಬಿಹಾರ ಚುನಾವಣೆ ಮೋದಿ ಅವರಿಗೆ ಮಹತ್ವದ ಚುನಾವಣಾ ಪರೀಕ್ಷೆ: ಯುಎಸ್ ಚಿಂತಕರ ಚಾವಡಿ
ಬಿಹಾರ ವಿಧಾನಸಭಾ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಅವರ ಅತಿದೊಡ್ಡ ಚುನಾವಣಾ ಪರೀಕ್ಷೆ ಎಂದು ಅಮೆರಿಕಾದ ಚಿಂತಕರ ಚಾವಡಿ ಅಭಿಪ್ರಾಯಪಟ್ಟಿದೆ.

ವಾಷಿಂಗ್ಟನ್: ಬಿಹಾರ ವಿಧಾನಸಭಾ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಅವರ ಅತಿದೊಡ್ಡ ಚುನಾವಣಾ ಪರೀಕ್ಷೆ ಎಂದು ಅಮೆರಿಕಾದ ಚಿಂತಕರ ಚಾವಡಿ ಅಭಿಪ್ರಾಯಪಟ್ಟಿದೆ.
ಮತದಾರ ನೀಡುವ ತೀರ್ಪು ಬಿಹಾರದ ಗಡಿ ಆಚೆಗೂ ಪರಿಣಾಮ ಬೀರಲಿದ್ದು ಪ್ರಧಾನಿ ಮೋದಿ ಅವರ ಅತಿದೊಡ್ಡ ಚುನಾವಣಾ ಪರೀಕ್ಷೆ ಎಂದು ಯುಎಸ್ ಚಿಂತಕರ ಚಾವಡಿಯ ಮಿಲನ್ ವೈಷ್ಣವ ಮತ್ತು ಸಖ್ ಶ್ಯಾಮ್ ಖೋಸ್ಲಾ ಅಭಿಪ್ರಾಯಪಟ್ಟಿದ್ದಾರೆ.
ಬಿಹಾರದಲ್ಲಿ ಎನ್.ಡಿ.ಎ ಮೈತ್ರಿಕೂಟಕ್ಕೆ ಬಹುಮತ ದೊರೆತದೆ ಅದು ಕೇಂದ್ರ ಸರ್ಕಾದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಲಿದೆ. ಒಂದು ವೇಳೆ ಬಿಹಾರದಲ್ಲಿ ಬಿಜೆಪಿಗೆ ಸೋಲುಂಟಾದರೆ ಕೇಂದ್ರ ಸರ್ಕಾರಕ್ಕೆ ಬಹುದೊಡ್ಡ ಹಿನ್ನಡೆಯುಂತಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಬಿಹಾರ ಚುನಾವಣೆ ಮೋದಿ ಅವರಿಗೆ ಮಾತ್ರವಲ್ಲದೇ ನಿತೀಶ್ ಕುಮಾರ್ ಅವರಿಗೂ ಸವಾಲಿನದ್ದಾಗಿದ್ದು, ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಮಿಲನ್ ವೈಷ್ಣವ ಮತ್ತು ಸಖ್ ಶ್ಯಾಮ್ ಖೋಸ್ಲಾ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


