ದೇಶ

ಸಾಂಪ್ರದಾಯಿಕ ಪೇಟ ಬಿಚ್ಚಿ ನೀರಲ್ಲಿ ಮುಳುಗುತ್ತಿದ್ದ ನಾಲ್ವರನ್ನು ರಕ್ಷಿಸಿದ ಸಿಖ್ ಯುವಕ

ಸಿಖ್ ಯುವಕನೊಬ್ಬ ತನ್ನ ಸಾಂಪ್ರದಾಯಿಕ ರುಮಾಲು ಬಿಚ್ಚಿ ನೀರು ಪಾಲಾಗುತ್ತಿದ್ದ ನಾಲ್ವರನ್ನು ರಕ್ಷಿಸಿ ಸಾಹಸ ಮೆರೆದ ಘಟನೆ...

ಸಾಂಪ್ರದಾಯಿಕ ಪೇಟ ಬಿಚ್ಚಿ ನೀರಲ್ಲಿ ಮುಳುಗುತ್ತಿದ್ದ ನಾಲ್ವರನ್ನು ರಕ್ಷಿಸಿದ ಸಿಖ್ ಯುವಕ
ಮುಳುಗುತ್ತಿದ್ದವರನ್ನು ರಕ್ಷಣೆ ಮಾಡುತ್ತಿರುವ ದೃಶ್ಯ
Published On :

ಸಂಗ್ರೂರ್‌: ಸಿಖ್ ಯುವಕನೊಬ್ಬ ತನ್ನ ಸಾಂಪ್ರದಾಯಿಕ ರುಮಾಲು ಬಿಚ್ಚಿ ನೀರು ಪಾಲಾಗುತ್ತಿದ್ದ ನಾಲ್ವರನ್ನು ರಕ್ಷಿಸಿ ಸಾಹಸ ಮೆರೆದ ಘಟನೆ ಪಂಜಾಬ್ ನಲ್ಲಿ ನಡೆದಿದೆ.

ಗಣೇಶನ ವಿಸರ್ಜನೆಗೆ ಎಂದು ನಾಲ್ವರು ನೀರಿಗಿಳಿದಿದ್ದರು. ಈ ವೇಳೆ ಆ ನಾಲ್ವರು ನೀರಿನ ಆಳಕ್ಕೆ ಸಿಕ್ಕಿ ಪ್ರಾಣಾಪಾಯಕ್ಕೆ ಸಿಲುಕಿದ್ದರು. ಅಲ್ಲೇ ದಡದಲ್ಲಿದ್ದ ಇಂದ್ರಪಾಲ್ ಸಿಂಗ್ ಎಂಬ ಸಿಖ್ ಯುವಕ ಅವರನ್ನು ರಕ್ಷಿಸಲು ವೈಯರ್ ಎಸೆದಿದ್ದಾನೆ. ಆದರೆ ಅದು ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಆತ ತನ್ನ ಪೇಟದ ಬಟ್ಟೆಯನ್ನು ಬಿಚ್ಚಿ ಎಸೆದಿದ್ದಾನೆ. ಇದನ್ನು ಹಿಡಿದು ನಾಲ್ವರು ದಡ ಸೇರಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಸಿಖ್ ಜನಾಂಗದ ಸಾಂಪ್ರದಾಯಿಕ ಪೇಟವನ್ನು ಬಿಚ್ಚಿ, ಅದರಿಂದ ನಾಲ್ವರ ಪ್ರಾಣವನ್ನು ರಕ್ಷಿಸುವ ಮೂಲಕ ಇಂದ್ರಪಾಲ್ ಸಿಂಗ್ ಈಗ ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡುತ್ತಿದ್ದಾನೆ. ಹೌದು, ಇವನ ಈ ಸಾಹಸ ವಿಡಿಯೋದಲ್ಲಿ ಚಿತ್ರೀಕರಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.