ಮೋದಿಯನ್ನು ರಾಖಿ ಸಾವಂತ್ ಗೆ ಹೋಲಿಸಿದ ಪಾಕಿಸ್ತಾನಿ ಪತ್ರಕರ್ತ
ನರೇಂದ್ರ ಮೋದಿ ಅವರನ್ನು ಚತುರ ರಾಜಕಾರಣಿ ಎಂದು ಪಾಕಿಸ್ತಾನ ಪತ್ರಿಕೆಯೊಂದು ಬರೆದ ಬೆನ್ನಲ್ಲೇ ಪಾಕ್ ಪತ್ರಕರ್ತರೊಬ್ಬರು ಮೋದಿ ಅವರನ್ನು ಐಟಂ ಗರ್ಲ್ ರಾಖಿ ಸಾವಂತ್ ಗೆ ಹೋಲಿಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಚತುರ ರಾಜಕಾರಣಿ, ಮೋದಿ ಅವರನ್ನು ಅಮೆರಿಕ ತಾರೆಯಂತೆ ಸ್ವಾಗತಿಸಿತು ಎಂದು ಪಾಕಿಸ್ತಾನ ಪತ್ರಿಕೆಯೊಂದು ಬರೆದ ಬೆನ್ನಲ್ಲೇ ಪಾಕ್ ಪತ್ರಕರ್ತರೊಬ್ಬರು ಮೋದಿ ಅವರನ್ನು ಐಟಂ ಗರ್ಲ್ ರಾಖಿ ಸಾವಂತ್ ಗೆ ಹೋಲಿಸಿದ್ದಾರೆ.
ಮೋದಿ ಅಮೇರಿಕಾ ಪ್ರವಾಸದ ಬಗ್ಗೆ ಬ್ಲಾಗ್ ಬರೆದಿರುವ ಪಾಕ್ ಪತ್ರಕರ್ತ ಡಾ.ಶಾಹಿದ್ ಮಸೂದ್, ಮೋದಿ ಅಮೇರಿಕ ಪ್ರವಾಸ ಮಾಧ್ಯಮಗಳು ಬಿಂಬಿಸಿರುವಷ್ಟು ವೈಭವವಾಗಿಲ್ಲ ಎಂದು ಹೇಳಿದ್ದು ಮೋದಿ ಅವರನ್ನು ರಾಖಿ ಸಾವಂತ್ ಗೆ ಹೋಲಿಸಿದ್ದಾರೆ.
ಮೋದಿ ಅವರ ವಿದೇಶ ಪ್ರವಾಸದ ಬಗ್ಗೆ ಸಂಪಾದಕೀಯ ಬರೆದಿದ್ದ ಪಾಕಿಸ್ತಾನ ಪತ್ರಿಕೆ, ಪ್ರಧಾನಿ ನರೇಂದ್ರ ಮೋದಿ ಭಾರತದ ರಾಜಕೀಯ ಹಾಗೂ ಸೇನೆಯ ಪ್ರಾಬಲ್ಯವನ್ನು ಹೆಚ್ಚಿಸುವ ಗುರಿ ಹೊಂದಿದ್ದು ಅವರೊಬ್ಬ ಚತುರ ರಾಜಕಾರಣಿ ಎಂದು ಹೇಳಿತ್ತು. ಅಲ್ಲದೇ ಅಮೆರಿಕಾ ನರೇಂದ್ರ ಮೋದಿ ಅವರನ್ನು ತಾರೆಯಂತೆ ಸ್ವಾಗತಿಸಿತು ಎಂದು ಬರೆದಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಪಾಕ್ ಪತ್ರಕರ್ತ ಡಾ.ಶಾಹಿದ್ ಮಸೂದ್ ಜನಪ್ರೀಯತೆ ವಿಷಯದಲ್ಲಿ ಮೋದಿ ಅವರನ್ನು ರಾಖಿ ಸಾವಂತ್ ಗೆ ಹೋಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


