ಸಾಮಾಜಿಕ ತಾಣಗಳನ್ನು ಬಳಸದೆಯೇ ನೆಹರೂ, ಇಂದಿರಾ ಜನಪ್ರಿಯರಾಗಿದ್ದರು!
ಸಾಮಾಜಿಕ ತಾಣಗಳ ಸಹಾಯ ಇಲ್ಲದೆಯೇ ಕಾಂಗ್ರೆಸ್ ಪ್ರಧಾನಿಗಳಾಗಿದ್ದ ಜವಾಹರ್ ಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಜನಪ್ರಿಯರಾಗಿದ್ದರು ಎಂದು ಶಿವಸೇನೆ...

Published On :
ಮುಂಬೈ: ಸಾಮಾಜಿಕ ತಾಣಗಳ ಸಹಾಯ ಇಲ್ಲದೆಯೇ ಕಾಂಗ್ರೆಸ್ ಪ್ರಧಾನಿಗಳಾಗಿದ್ದ ಜವಾಹರ್ ಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಜನಪ್ರಿಯರಾಗಿದ್ದರು ಎಂದು ಶಿವಸೇನೆ ಹೇಳಿದೆ. ಮೋದಿಯವರು ಅಮೆರಿಕಾಗೆ ಭೇಟಿ ಕೊಟ್ಟಿರುವುದನ್ನು ಶಿವಸೇನೆ ಈ ಉದಾಹರಣೆ ನೀಡಿ ಮೂದಲಿಸಿದೆ.
ಎಲ್ಲಿಗೆ ಹೋದರೂ ನರೇಂದ್ರ ಮೋದಿ ಅಲ್ಲಿ ಮೋಡಿ ಮಾಡುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಎಲ್ಲೇ ಹೋಗಲಿ ಅಲ್ಲಿ ಮೋದಿ, ಮೋದಿ, ಮೋದಿ...ಎಂಬ ಉದ್ಗಾರ ಕೇಳುತ್ತದೆ. ಆದರೆ ಈಗಿರುವ ಹಾಗೆ ಸಾಮಾಜಿಕ ತಾಣಗಳು ಇಲ್ಲದೇ ಇದ್ದ ಕಾಲದಲ್ಲಿ ನೆಹರೂ ಮತ್ತು ಇಂದಿರಾ ಗಾಂಧಿ ಪ್ರಸಿದ್ಧರಾಗಿದ್ದರು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದಿದೆ.
ಅದೇ ವೇಳೆ ಕಾಂಗ್ರೆಸ್ಸಿನವರೇ ಆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಿವಿ ನರಸಿಂಹ ರಾವ್ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನೂ ಶಿವಸೇನೆ ಇಲ್ಲಿ ಸ್ಮರಿಸಿದೆ.
ಮೋದಿಯವರಿಗೆ ಸಿಗುವ ಪ್ರಚಾರ ಮತ್ತು ಪ್ರಸಿದ್ಧಿಯನ್ನು ಅವರು ಆಸ್ವಾದಿಸುತ್ತಿದ್ದಾರೆ. ಆದರೆ ಭಾರತದ ಆರ್ಥಿಕ ಅಭಿವೃದ್ಧಿಗೆ ನೇತೃತ್ವ ವಹಿಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ನರಸಿಂಹ ರಾವ್ ಅವರ ಕೊಡುಗೆಗಳನ್ನು ನಾವು ಮರೆಯಬಾರದು. ನಮ್ಮ ದೇಶ ಆರ್ಥಿಕ ಬಿಕ್ಕಟ್ಟಿನಿಂದ ಸಂಕಷ್ಟಕ್ಕೀಡಾಗಿದ್ದಾಗ ಅವರು ಸರಿಯಾದ ನೀತಿಗಳನ್ನು ಅನುಸರಿಸಿದರು. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಅವರ ಕೊಡುಗೆಗಳನ್ನು ಮರೆಯಬಾರದು ಎಂದು ಶಿವಸೇನೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿಶಿವಸೇನೆShiv SenaJawaharlal NehruSaamanaIndira Gandhiಇಂದಿರಾ ಗಾಂಧಿSocial Mediaಜವಾಹರ್ ಲಾಲ್ ನೆಹರೂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


