ದೇಶ

ಬಿಜೆಪಿ ಗೆದ್ದರೆ ರದ್ದಾದೀತು ಮೀಸಲು

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮೀಸಲು ನೀತಿಯೇ ರದ್ದು ಮಾಡೀತು. ಇಂಥ ಒಂದು ಆತಂಕ...

ಬಿಜೆಪಿ ಗೆದ್ದರೆ ರದ್ದಾದೀತು ಮೀಸಲು
ನಿತೀಶ್ ಕುಮಾರ್
Published On :

ಪಟನಾ/ಜೆಮ್ಶೆಡ್‍ಪುರ/ಖಗಾರಿಯಾ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮೀಸಲು ನೀತಿಯೇ ರದ್ದು ಮಾಡೀತು. ಇಂಥ ಒಂದು ಆತಂಕ ವ್ಯಕ್ತಪಡಿಸಿದ್ದು ಜೆಡಿಯು ನಾಯಕ ನಿತೀಶ್‍ಕುಮಾರ್.

ಬಿಹಾರದ ಖಗಾರಿಯಾದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮೀಸಲು ನೀತಿ ಪರಿಶೀಲನೆಗೆ ಈಗಾಗಲೇ ಸಲಹೆ ಮಾಡಿದ್ದಾರೆ. ಹೀಗಾಗಿ ಬಿಹಾರ ಚುನಾವಣೆಯಲ್ಲಿ ಎನ್‍ಡಿಎ ಗೆದ್ದರೆ ಒಬಿಸಿ, ಎಸ್‍ಸಿ, ಎಸ್‍ಟಿಗಳಿಗೆ ನೀಡಲಾಗಿರುವ ಮೀಸಲು ಸೌಲಭ್ಯ ರದ್ದಾಗಲಿದೆ ಎಂದು ಹೇಳಿದ್ದಾರೆ.

ಆರ್‍ಜೆಡಿಜೆಡಿಯುಕಾಂಗ್ರೆಸ್ ಮೈತ್ರಿಕೂಟ ಗೆದ್ದರೆ ಬಿಹಾರದ ಸರ್ಕಾರಿ ಉದ್ಯೋಗ ವ್ಯವಸ್ಥೆಯಲ್ಲಿ ಶೇ.35ರಷ್ಟು ಮೀಸಲು ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಬಿಹಾರಕ್ಕೆ ರು.2.70 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ ಪ್ರಧಾನಿಯನ್ನು ಲೇವಡಿ ಮಾಡಿದ ನಿತೀಶ್, ``ನೀವೇನೂ ಚಿಂತೆ ಮಾಡಬೇಡಿ. ನಮಗೆ ನಮ್ಮ ಅಭಿವೃದ್ಧಿಗಾಗಿ ಯಾವ ರೀತಿ ಸಂಪನ್ಮೂಲ ಸಂಗ್ರಹಿಸಬೇಕು ಎನ್ನುವುದು ಗೊತ್ತು'' ಎಂದಿದ್ದಾರೆ.

ಯಾವುದೇ ಜನಾಂಗಕ್ಕೆ ಅನ್ಯಾಯವಾಗದಂತೆ ಅಭಿವೃದ್ಧಿ ಪಥದಲ್ಲಿ ಬಿಹಾರವನ್ನು ಮುನ್ನಡೆಸುವುದಾಗಿ ಅವರು ಪ್ರತಿಪಾದಿಸಿದ್ದಾರೆ. ನಿತೀಶ್ ಬೆಂಬಲ: ಗುಜರಾತ್‍ನಲ್ಲಿ ಪಟೇಲ್ ಮೀಸಲು ನೀಡುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ಹಾರ್ದಿಕ್ ಪಟೇಲ್ ನಿತೀಶ್ ಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಕುಮಾರ್ ಪಟೇಲ್ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಈ ನಿರ್ಧಾರ ಎಂದಿದ್ದಾರೆ ಹಾರ್ದಿಕ್.

ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಬಿಹಾರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅವರು ಶ್ಲಾŒಸಿದ್ದಾರೆ. ಜೆಮ್ಶೆಡ್‍ಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು. ಆರು ದಶಕಗಳಿಂದ ದೇಶದಲ್ಲಿರುವ ಮೀಸಲು ವ್ಯವಸ್ಥೆ ಬದಲಾಗಬೇಕೆಂದು ಅವರು ಇದೇ ಸಂದರ್ಭದಲ್ಲಿ ಸಲಹೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.