ಇಸ್ಲಾಮಿಕ್ ಸ್ಟೇಟ್ ಸೇರಲಿಚ್ಛೆ ವ್ಯಕ್ತಪಡಿಸಿದ ಹಿಂದೂ ಯುವತಿ
ದೆಹಲಿಯ ಹಿಂದೂ ಯುವತಿಯೊಬ್ಬಳು ಸಿರಿಯಾಗೆ ಹೋಗಿ ಇಲ್ಲಿ ಇಸಿಸ್‌ಗೆ ಸಹಾಯ ಮಾಡಲು ಯೋಜನೆ ಹೂಡಿದ್ದಾಳೆ. ಅದೃಷ್ಟವಶಾತ್ ಆಕೆಯ ಅಪ್ಪನಿಗೆ ...

Published On :
ನವದೆಹಲಿ: ದೆಹಲಿಯ ಹಿಂದೂ ಯುವತಿಯೊಬ್ಬಳು ಸಿರಿಯಾಗೆ ಹೋಗಿ ಇಲ್ಲಿ ಇಸಿಸ್‌ಗೆ ಸಹಾಯ ಮಾಡಲು ಯೋಜನೆ ಹೂಡಿದ್ದಾಳೆ. ಅದೃಷ್ಟವಶಾತ್ ಆಕೆಯ ಅಪ್ಪನಿಗೆ ಈ ವಿಷಯ ಗೊತ್ತಾಗಿದ್ದು, ಅವರು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ಪತ್ರಿಕೆಯೊಂದರ ಪ್ರಕಾರ 20ರ ಹರೆಯದ ಯುವತಿ ದೆಹಲಿ ಯುನಿವರ್ಸಿಟಿ ಕಾಲೇಜಿನಲ್ಲಿ ಪದವಿ ಮುಗಿಸಿ ಆಸ್ಟ್ರೇಲಿಯಾದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಆಕೆ ವಾಪಸ್ ಬಂದಾಗ ಆಕೆ ಬದಲಾಗಿದ್ದಳು ಎಂದು ಆಕೆಯ ಅಪ್ಪ ಸೇನೆಯಿಂದ ನಿವೃತ್ತರಾಗಿರುವ ಲೆಫ್ಟೆನೆಂಟ್ ಕರ್ನಲ್ ಹೇಳಿರುವುದನ್ನು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಿದೆ.
ಮಾಜಿ ಸೇನಾಧಿಕಾರಿಯಾಗಿರುವ ಅಪ್ಪನಿಗೆ ಮಗಳ ಕಂಪ್ಯೂಟರ್‌ನಿಂದ ಆಕೆ ಸಿರಿಯಾಗೆ ಹೋಗುವ ಮತ್ತು ಇಸ್ಲಾಮಿಕ್ ಸ್ಟೇಟ್‌ನ ನಿಯೋಜಕರ ಬಗ್ಗೆ ಆಕೆಗೆ ಸಂಪರ್ಕವಿರುವ ಬಗ್ಗೆ ಪತ್ತೆಯಾಗಿದೆ. ಕೂಡಲೇ ಅವರು ಮಗಳ ಯೋಜನೆ ಬಗ್ಗೆ ಎನ್‌ಐಎ ಗೆ ಸುದ್ದಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಜಾಗೃತವಾದ ಗುಪ್ತ ಚರ ಸಂಸ್ಥೆ ಮಹಿಳೆಯ ಈ ಯೋಜನೆಗೆ ತಡೆಯೊಡ್ಡಿದೆ.
ಇಸ್ಲಾಮಿಕ್ ಸ್ಟೇಟ್ ತಮ್ಮ ತಂಡಕ್ಕೆ ಸೇರುವಂತೆ ಮಹಿಳೆಯರನ್ನು ಪುಸಲಾಯಿಸುವ ಕೆಲಸ ಮಾಡುತ್ತಿದ್ದೆ. ಇತ್ತೀಚೆಗೆ ಅರಬ್ ರಾಷ್ಟ್ರದಲ್ಲಿ ಇಬ್ಬರು ಹಿಂದೂಗಳು ಇಸಿಸ್ ಸೇರಲು ಇಚ್ಛೆಪಡಿಸಿರುವ ಬಗ್ಗೆ ವರದಿಯಾಗಿತ್ತು. ಆದಾಗ್ಯೂ, ಭಾರತೀಯರು ಇಸ್ಲಾಮಿಕ್ ಸ್ಟೇಟ್‌ನವರೊಂದಿಗೆ ಸ್ನೇಹ ಸಂಬಂಧ ಬೆಳೆಸಿ ಇಸಿಸ್‌ನತ್ತ ಆಕರ್ಷಿತರಾಗುತ್ತಿದ್ದಾರೆ ಎಂಬ ಸುದ್ದಿಯನ್ನೂ ಇಲ್ಲಿ ಅಲ್ಲಗೆಳೆಯುವಂತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


