ಉತ್ತರ ಪ್ರದೇಶದಲ್ಲಿ ಬಾಬಾ ಆಗಿದ್ದ ಬೋಸ್..?
ನೇತಾಜಿ ಭಾರತದಲ್ಲೇ ಸನ್ಯಾಸಿಯಾಗಿ ಜೀವನ ನಡೆಸುತ್ತಿದ್ದರೆ? ಹೌದೆನ್ನುತ್ತಾರೆ ಅವರ ಕೆಲ ಆತ್ಮೀಯರು. ಆದರೆ ಇದು ನೇತಾಜಿ ಅವರಿಗೆ ಆತ್ಮೀಯರಾಗಿದ್ದ ಕೆಲವೇ ಕೆಲವರಿಗೆ...

ನೇತಾಜಿ ಭಾರತದಲ್ಲೇ ಸನ್ಯಾಸಿಯಾಗಿ ಜೀವನ ನಡೆಸುತ್ತಿದ್ದರೆ? ಹೌದೆನ್ನುತ್ತಾರೆ ಅವರ ಕೆಲ ಆತ್ಮೀಯರು. ಆದರೆ ಇದು ನೇತಾಜಿ ಅವರಿಗೆ ಆತ್ಮೀಯರಾಗಿದ್ದ ಕೆಲವೇ ಕೆಲವರಿಗೆ ಗೊತ್ತಿದ್ದ ಸತ್ಯ. ನೇತಾಜಿಗೆ ಆತ್ಮೀಯರಾಗಿದ್ದ ಸುನಿಲ್ ಗುಪ್ತಾ ಎನ್ನುವವರು ಉತ್ತರಪ್ರದೇಶದ ಫೈಜಾಬಾದ್‍ನ ಭಗ್ ವಾನ್ ಜಿ ಎನ್ನುವ ಸಾಧುವೊಬ್ಬರನ್ನು ಭೇಟಿಯಾಗಲು ನಿರಂತರವಾಗಿ ಹೋಗಿ ಬರುತ್ತಿದ್ದರಂತೆ.
ನಂತರ ಸುನಿಲ್ ಗುಪ್ತಾ ಶಿಷ್ಯ ದಾಸ್‍ಗುಪ್ತಾ ಈ ವಿಚಾರವನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಹೇಳಿಕೊಂಡಿದ್ದಾರೆ. ನೇತಾಜಿಗೆ ಜಗತ್ತಿನ ಆಗುಹೋಗುಗಳ ಬಗ್ಗೆ ಚೆನ್ ನಾಗಿ ಅರಿವಿತ್ತು. ರಷ್ಯಾದ ವಿಭಜನೆ, ಬಾಂಗ್ಲಾ ವಿಮೋಚನೆ ಕುರಿತು ಭವಿಷ್ಯ ನುಡಿದಿದ್ದರು ಎನ್ನುತ್ತಾರೆ ಗುಪ್ತಾ. ಪತ್ರಕರ್ತ ವಿ.ಎನ್. ಅರೋರಾ ಕೂಡ ಬಾಬಾ ಕುರಿತು ಸಾಕಷ್ಟು ಸಂಶೋಧನೆ ಮಾಡಿದವರು. ಅವರೂ ಬಾಬಾ ಬೇರಾರೂ ಅಲ್ಲ ನೇತಾಜಿ ಎಂದು ಪ್ರತಿಪಾದಿಸುತ್ತಾರೆ. ಬಾಬಾ ಸಾವಿನ ನಂತರ ಜಿಲ್ಲಾಧಿಕಾರಿ ಅನುಮತಿ ಪಡೆದು ಅವರ ಮನೆಯ ಪರಿಶೀಲನೆ ನಡೆಸಿದ್ದರಂತೆ. ಅಲ್ಲಿ ಅವರಿಗೆ ನೇತಾಜಿಗೆ ಸಂಬಂಧಿಸಿದ ಹಲವು ಕೃತಿಗಳು, ನೇತಾಜಿ ಬೆಂಬಲಿಗರ ಹೇಳಿಕೆಗಳ ಪತ್ರಿಕೆಯ ಕ್ಲಿಪ್ಪಿಂಗ್ ಪತ್ತೆಯಾಗಿದ್ದವಂತೆ.
ಬಾಬಾ ಸಹವರ್ತಿ, ಅಯೋಧ್ಯೆಯ ತೀರ್ಥ ಪುರೋಹಿತರಾಗಿದ್ದ ರಾಮ್ ಕಿಶೋರ್ ಒಂದು ದಿನ ರಾತ್ರಿ ಹೊರಗೆ ಬೆಂಕಿ ಹಾಕಿಕೊಂಡು ಮಲಗಿದ್ದರಂತೆ. ಆಗ ಅವರಿಗೆ ತಕ್ಷ ಣ ಕೋಣೆಂಯೊಳಗಿದ್ದ ಬಾಬಾ ಸ್ಥಿತಿ ನೆನಪಾಗಿ ನಿಮಗೇನಾದರೂ ಬೆಂಕಿಯ ಅವಶ್ಯಕತೆ ಇದೆಯೇ ಎಂದು ಕೇಳಿದರಂತೆ. ಆಗ ಬಾಬಾ ``ಈ ದೇಹ ಸೈಬೀರಿಯಾದಲ್ಲಿ ಬದುಕಿದೆ. ನನಗೆ ಚಳಿ ಕಾಯಿಸುವ ಅಗತ್ಯವಿಲ್ಲ'' ಎಂದು ಉತ್ತರಿಸಿದ್ದರು ಎನ್ನುವುದನ್ನು ಅರೋರಾ ಉಲ್ಲೇಖಿಸುತ್ತಾರೆ.
ಸಿಐಎ ವರದಿ ಹೇಳುವುದೇನು?
ನೇತಾಜಿ ವಿಮಾನ ದುರಂತದಲ್ಲಿ ಮೃತಪಟ್ಟವರು ಎನ್ನುವ ವಾದವನ್ನು ಸಿಐಎ ಕೂಡ ಒಪ್ಪಿಕೊಂಡಿಲ್ಲ. ಜವಾಹರಲಾಲ್ ನೆಹರೂ ಸರ್ಕಾರದ ವಿರುದ್ಧ ಬಂಡುಕೋರರ ಗುಂಪೊಂದನ್ನು ನೇತಾಜಿ ಕಟ್ಟುತ್ತಿರಬಹುದು ಎಂದು ಸಿಐಎಗೆ ಸೇರಿದ 1964ರ ವರದಿಯೊಂದು ಮಾಹಿತಿ ನೀಡುತ್ತದೆ. ನೇತಾಜಿ ಸೈಬೀರಿಯಾದಲ್ಲಿದ್ದಾರೆ. ಭಾರತಕ್ಕೆ ದೊಡ್ಡ ಮಟ್ಟದಲ್ಲಿ ವಾಪಸಾಗುವ ಅವಕಾಶಕ್ಕಾಗಿ ಅವರು ಎದುರು ನೋಡುತ್ತಿದ್ದಾರೆ ಎಂಬ ಮಾಹಿತಿಯನ್ ನೂ ಮೂಲಗಳನ್ನು ಆಧರಿಸಿ ಸಿಐಎ ವರದಿಯಲ್ಲಿ ಹೇಳಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


