ಗುಜರಾತ್ ಕರಾವಳಿಯಲ್ಲಿ ಭಾರತೀಯ ಮೀನುಗಾರನ ಮೇಲೆ ಗುಂಡಿನ ದಾಳಿ
ಗುಜರಾತ್ ನಲ್ಲಿರುವ ಇಂಡೋ-ಪಾಕ್ ಅಂತಾರಾಷ್ಟ್ರೀಯ ಕರಾವಳಿ ಪ್ರದೇಶದಲ್ಲಿ ಭಾರತೀಯ ಮೀನುಗಾರನೋರ್ವ ಗುಂಡಿನ ದಾಳಿಗೆ ಬಲಿಯಾಗಿದ್ದು, ಪಾಕಿಸ್ತಾನ ನೌಕಾದಳದ ಸಿಬ್ಬಂದಿಗಳು ಗುಂಡಿನ ದಾಳಿ ನಡೆಸಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ...

ಅಹ್ಮದಾಬಾದ್: ಗುಜರಾತ್ ನಲ್ಲಿರುವ ಇಂಡೋ-ಪಾಕ್ ಅಂತಾರಾಷ್ಟ್ರೀಯ ಕರಾವಳಿ ಪ್ರದೇಶದಲ್ಲಿ ಭಾರತೀಯ ಮೀನುಗಾರನೋರ್ವ ಗುಂಡಿನ ದಾಳಿಗೆ ಬಲಿಯಾಗಿದ್ದು, ಪಾಕಿಸ್ತಾನ ನೌಕಾದಳದ ಸಿಬ್ಬಂದಿಗಳು ಗುಂಡಿನ ದಾಳಿ ನಡೆಸಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ.
ಗುಜರಾತ್ ನ ದ್ವಾರಕ ಕರಾವಳಿ ಪ್ರದೇಶದಲ್ಲಿ ಪಾಕಿಸ್ತಾನಿ ನೌಕಾದಳದ ಪಡೆಗಳು ಭಾರತೀಯ ಮೀನುಗಾರಿಕಾ ಬೋಟ್ ಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಮೀನುಗಾರು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮೃತ ಮೀನುಗಾರನನ್ನು ಇಕ್ಬಾಲ್ ಗುರುತಿಸಲಾಗಿದೆ. ಒಟ್ಟು ಎರಡು ಬೋಟ್ ಗಳ ಮೇಲೆ ಪಾಕಿಸ್ತಾನ ನೌಕಾಪಡೆ ಗುಂಡಿನ ದಾಳಿ ನಡೆಸಿದೆ ಎಂದು ತಿಳಿದುಬಂದಿದ್ದು, ಘಟನಾ ಸ್ಥಳಕ್ಕೆ ಭಾರತೀಯ ನೌಕಾಪಡೆಯ ಅಧಿಕಾರಿಗಳು ದೌಡಾಯಿಸಿದ್ದಾರೆ.
ಪ್ರೇಮ್ ಜೀ ಎಂಬ ಬೋಟ್ ಮೇಲೆ ಪಾಕಿಸ್ತಾನ ನೌಕಾಪಡೆಯ ಸಿಬ್ಬಂದಿಗಳು ಗುಂಡಿನ ದಾಳಿ ನಡೆದಿದ್ದು, ಬೋಟ್ ನಲ್ಲಿದ್ದ ಇಕ್ಬಾಲ್ ಎಂಬ ಮೀನುಗಾರ ಸಾವಿಗೀಡಾಗಿದ್ದಾನೆ. ಬೋಟ್ ನಲ್ಲಿ ಒಟ್ಟು ಐದು ಮಂದಿ ಮೀನುಗಾರರು ಇದ್ದರು ಎಂದು ತಿಳಿದುಬಂದಿದೆ. ಇನ್ನು ಭಾರತೀಯ ಮೀನುಗಾರರು ಪಾಕಿಸ್ತಾನಕ್ಕೆ ಸೇರಿದ ಗಡಿ ಪ್ರದೇಶಕ್ಕೆ ಅಕ್ರಮವಾಗಿ ಬಂದಿದ್ದರೂ ಅವರನ್ನು ಬಂಧಿಸಿ ವಿಚಾರಣೆ ನಡೆಸಬಹುದಿತ್ತು. ಆದರೆ ಏಕಾಏಕಿ ಗುಂಡಿನ ದಾಳಿ ನಡೆಸುವ ಅಗತ್ಯವಿರಲಿಲ್ಲ. ಹೀಗಾಗಿ ಭಾರತೀಯ ನೌಕಾಪಡೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಹೆಚ್ಚಿನ ಮಾಹಿತಿ ಪಡೆಯಲು ಮುಂದಾಗಿದ್ದಾರೆ.
ಮತ್ತೊಂದು ಮೂಲಗಳ ಪ್ರಕಾರ ಪಾಕಿಸ್ತಾನ ನೌಕಾಪಡೆಯ ಸಿಬ್ಬಂದಿಗಳೇ ಅಕ್ರಮವಾಗಿ ಅಂತಾರಾಷ್ಟ್ರೀಯ ಕರಾವಳಿ ಪ್ರದೇಶವನ್ನು ಪ್ರವೇಶಿಸಿ ಭಾರತೀಯ ಮೀನುಗಾರಿಕಾ ಬೋಟ್ ಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿದ್ದು, ತನಿಖೆಯ ಬಳಿಕವಷ್ಟೇ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


